ಪೊಲೀಸ್ (Police) ವಸತಿಗಾಗಿ ಕಟ್ಟಡ ನಿರ್ಮಿಸಿ ಒಂದುವರೆ ವರ್ಷದ ನಂತರ ಅದನ್ನು ಪೊಲೀಸ್ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಕಾರವಾರದ ಕಾಜುಭಾಗದಲ್ಲಿ ನೂತನವಾಗಿ ನಿರ್ಮಿಸಲಾದ 24 ಪೊಲೀಸ್ (Police) ವಸತಿಗೃಹಗಳನ್ನು ಸಚಿವ ಮಂಕಾಳು ವೈದ್ಯ ಉದ್ಘಾಟಿಸಿದರು. ಜೊತೆಗೆ ಮತ್ತೆ 48 ಪೊಲೀಸ್ ವಸತಿಗೃಹಗಳ ನಿರ್ಮಾಣದ ಶಂಕುಸ್ಥಾಪನೆ ನೆರವೇರಸಿದರು.
ಈ ವೇಳೆ ಮಾತನಾಡಿದ ಅವರು `ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಶ್ರಮ ಮತ್ತು ಕುಟುಂಬವನ್ನೂ ಲೆಕ್ಕಿಸದೇ ಸಾರ್ವಜನಿಕರ ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದಾರೆ. ವರ್ಷದ 365 ದಿನವೂ ಸಾರ್ವಜನಿಕರ ರಕ್ಷಣೆಗೆ ಸದಾ ದುಡಿಯುವ ಪೊಲೀಸ್ ಸಿಬ್ಬಂದಿಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ದವಾಗಿದೆ\’ ಎಂದರು. `ಕಾರವಾರ, ಅಂಕೋಲಾ, ಹೊನ್ನಾವರದಲ್ಲಿ ಇನ್ನಷ್ಟು ವಸತಿ ಗೃಹ ನಿರ್ಮಿಸಲಾಗುತ್ತದೆ. ವರ್ಷದ ಒಳಗೆ ಎಲ್ಲಾ ಕಾಮಗಾರಿ ಮುಗಿಯಲಿದೆ\’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಮಾತನಾಡಿ `ಜಿಲ್ಲೆಯಲ್ಲಿ ಸುಮಾರು 2000 ಪೊಲೀಸ್ ಸಿಬ್ಬಂದಿ ಇದ್ದಾರೆ. ಅವರಿಗಾಗಿ ಇನ್ನೂ 500ಕ್ಕೂ ಹೆಚ್ಚು ವಸತಿಗೃಹಗಳ ಅವಶ್ಯಕತೆಯಿದೆ\’ ಎಂದರು. `ಎಲ್ಲಾ ಜನಪ್ರತಿನಿಧಿಗಳು ತಮ್ಮ ಶಾಸಕರ ನಿಧಿಯಿಂದ ಪೊಲೀಸ್ ಇಲಾಖೆಗೆ ಹೊಸ ವಾಹನ ನೀಡುತ್ತಿದ್ದಾರೆ\’ ಎಂದು ತಿಳಿಸಿದರು.
ಪೊಲೀಸರಿಗೆ ವಸತಿಗೃಹ ಇದ್ದರೂ ಅದು ದೊರೆಯದ ಬಗ್ಗೆ `S News ನ್ಯೂಸ್ ಡಿಜಿಟಲ್\’ ಜೂನ್ 28ರಂದು ವರದಿ ಪ್ರಕಟಿಸಿತ್ತು. ಆ ವರದಿ ಇಲ್ಲಿ ಓದಿ..
https://sirinews.in/kwrpolice/