ವರಮಹಾಲಕ್ಷ್ಮಿ ಹಬ್ಬ, ರಕ್ಷಾ ಬಂಧನ ಹಾಗೂ ವಾರಂತ್ಯದ ರಜೆ ಅಂಗವಾಗಿ ಅಗಸ್ಟ 16ರಿಂದ 19ರರೆಗೆ ಕೆಎಸ್ಆರ್ಟಿಸಿ (KSRTC) ವಿವಿಧ ಊರುಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ.
ಬೆಂಗಳೂರಿನಿoದ ರಾಜ್ಯ – ಅಂತರರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಆ 14ರಿಂದಲೇ ಹೆಚ್ಚುವರಿ ಬಸ್ ಓಡಾಟ ಶುರುವಾಗಿದೆ. ಹಬ್ಬ ಮುಗಿದ ಮೇಲೆ ಅಂದರೆ ಆ 18ರಂದು ಮತ್ತು ನಂತರದ ದಿನಗಳಂದು ಪ್ರಮುಖ ಸ್ಥಳಗಳಿಂದ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿ ನಿಗಮ ಹೇಳಿಕೊಂಡಿದೆ.
ವಾರಾಂತ್ಯ ರಜೆಗಳ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ ವಾ.ಕ.ರ.ಸಾ.ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 50 ಹೆಚ್ಚುವರಿ ವಿಶೇಷ ಬಸ್ಸುಗಳ ಓಡಾಟ ನಡೆಯಲಿದೆ. ಹೀಗಾಗಿ ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವಂತೆ ಅಲ್ಲಿನ ಅಧಿಕಾರಿಗಳು ಮನವಿ ಮಾಡಿದ್ದಾರೆ.
.