2013ರಲ್ಲಿ ಗೃಹ ಮಂಡಳಿಗೆ ಮನೆ (House) ನಿರ್ಮಾಣಕ್ಕಾಗಿ ಕಾಯ್ದಿಟ್ಟ ಹತ್ತು ಎಕರೆ ಭೂಮಿಯನ್ನು ಬೇರೆ ಯಾವುದಕ್ಕೂ ಉಪಯೋಗಿಸಬಾರದು ಎಂದು ದಾಂಡೇಲಿ ಜನ ಒತ್ತಡ ಹಾಕಿದ್ದರು. ಇದರ ಪರಿಣಾಮವಾಗಿ ಆ ಪ್ರದೇಶದಲ್ಲಿ ಜಿ ಪ್ಲಸ್ 2 ಕೆಲಸ ಆರಂಭವಾಗಿದ್ದು, 998 ಮನೆ ಪೂರ್ಣವಾಗಿ ಮನೆಗೆ ಅರ್ಜಿ ಹಾಕಿ, ಹಣ ತುಂಬಿದ ಜನರಿಗೆ ಈವರೆಗೂ ಮನೆ ಸಿಕ್ಕಿಲ್ಲ!
`ದಾಂಡೇಲಿಯಲ್ಲಿ ಜಿ ಪ್ಲಸ್ 2 ಮನೆಗಳನ್ನು ಪೂರ್ಣಗೊಳಿಸುತ್ತಿಲ್ಲ. 900 ಜನ ಫಲಾನುಭವಿಗಳು ಮನೆಗಳಿಗಾಗಿ ಹಣ ತುಂಬಿ ಕಾಯುತ್ತಿದ್ದಾರೆ. ನಗರಸಭೆ ಪೌರಾಯುಕ್ತರು ಈ ಬಗ್ಗೆ ಗಮನಹರಿಸಿಲ್ಲ. ಗುತ್ತಿಗೆದಾರ 33 ಕೋಟಿ ಹಣ ಪಡೆದುಕೊಂಡಿದ್ದರೂ ಕೆಲಸ ಮುಗಿಸಿಲ್ಲ\’ ಎಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್ ದೂರಿದರು.
`ದಾಂಡೇಲಿ ನಗರಸಭೆಯಲ್ಲಿ ಬಹುತೇಕ ಅಕ್ರಮ ಕೆಲಸಗಳು ನಡೆಯುತ್ತಿವೆ\’ ಎಂದು ಆಪಾದಿಸಿದರು. ಇದೆಲ್ಲವನ್ನು ವಿರೋಧಿಸಿ ಅ 19ರಿಂದ ನಗರಸಭೆಯೊಳಗೆ ಕುಳಿತು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.