ಕಾರವಾರ: ಕೋಡಿಬೀರ ದೇವಸ್ಥಾನದ ಬಳಿ ಗೋವಾ ಸರಾಯಿ (Illegal drinks) ಮಾರುತ್ತಿದ್ದ ಪ್ರಮೋದ ಹರಿಕಂತ್ರ ಎಂಬಾತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಅಗಸ್ಟ 14ರಂದು ಈತ ದೇವಾಲಯದ ಕಮಾನಿನ ಬಳಿ ನಿಂತು ಸರಾಯಿ ಮಾರಾಟ ಮಾಡುತ್ತಿದ್ದ. ಆತನ ಮನೆ ಸಹ ಅಲ್ಲಿಯೇ ಇದ್ದು, ಮನೆಯೊಳಗೆ ಸರಾಯಿ ದಾಸ್ತಾನು ಮಾಡಿಕೊಂಡಿದ್ದ. ದಾಳಿ ನಡೆಸಿದ ಪೊಲೀಸರಿಗೆ 18799ರೂ ಮೌಲ್ಯದ ಗೋವಾ ಸರಾಯಿ ದೊರೆತಿದೆ. ದಾಳಿಯ ವೇಳೆ ಪ್ರಮೋದ ಹರಿಕಂತ್ರ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ. ಇದೀಗ ಪೊಲೀಸರು ಆತನ ಹುಡುಕಾಟ ಶುರು ಮಾಡಿದ್ದಾರೆ.