ಭಾರತ ಬೆಂಜ್ ಲಾರಿಗೆ (Fire accident) ಬೆಂಕಿ ತಗುಲಿದ ಪರಿಣಾಮ ಲಾರಿಯ ಬಹುಪಾಲ ಭಾಗ ಸುಟ್ಟು ಹೋಗಿದೆ. ಈ ಲಾರಿ ಮುಂಡಗೋಡಿನ ವ ಸನವಳ್ಳಿ ಜಲಾಶಯದ ಬಳಿ ನಿಂತಾಗ ಅಗ್ನಿ ಅವಘಡ ನಡದಿದೆ. ದುರಂತದಲ್ಲಿ ಲಾರಿ ಪೂರ್ತಿಯಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ.
ಲಾರಿಯ ಕ್ಯಾಬಿನ್, ಇಂಜಿನ್, ಬ್ಯಾಟರಿ, ಲಾರಿಯ ಮುಂದಿನ ಎರಡು ಟೈಯರ್ ಸುಟ್ಟು ಹೋಗಿದೆ. ಲಾರಿಯಲ್ಲಿದ್ದವರು ಅಲ್ಲಿಂದ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಹುಬ್ಬಳ್ಳಿ ಮೂಲದ ಲಾರಿ ಇದಾಗಿದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರು. ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಎಂ ಎಂ ಭುಜಂಗ ರಕ್ಷಣಾ ಕಾರ್ಯಾಚರಣೆ ನಡೆಸಿದ ಪರಿಣಾಮ ಲಾರಿಯ ಅವಶೇಷಗಳು ಉಳಿದಿವೆ. ಅಗ್ನಿಶಾಮಕ ಸಿಬ್ಬಂದಿ ಅಮರ ಕಾಂಬಳೆ, ಬಸವರಾಜ ನಾಣಾಪುರ, ಚಮನಸಾಬ್ ನದಾಫ್, ಸೋಮಶೇಖರ್ ಜೀವಣ್ಣನವರ್ ಲಾರಿಗೆ ಹತ್ತಿದ್ದ ಬೆಂಕಿ ಆರಿಸಿದರು.