ಕರ್ನಾಟಕ ವಿಶ್ವವಿದ್ಯಾಲಯದ ಅಡಿ ಬರುವ ಭಟ್ಕಳ ಅಂಜುಮಾನ್ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಪ್ರಕಾಶ ನಾಯ್ಕ ಬಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿಶ್ವ ವಿದ್ಯಾಲಯಕ್ಕೆ (Student achievement) ಮೂರನೇ ಸ್ಥಾನ ಪಡೆದಿದ್ದಾರೆ.
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಹ ಪೂಜಾ ನಾಯ್ಕ ಸಾಧನೆ ಮಾಡಿದ್ದರು. ಪ್ರಸ್ತುತ ಪದವಿ ಫಲಿತಾಂಶದಲ್ಲಿ ಸಹ ಅದು ಮುಂದುವರೆದಿದೆ. ಪೂಜಾ ಅವರಿಗೆ ಮೊದಲನೇ ಸ್ಥಾನದ ನಿರೀಕ್ಷೆಯಿತ್ತು. ಆದರೆ, ಅನಾರೋಗ್ಯ ಕಾಡಿದ್ದು ಕೊಂಚ ಹಿನ್ನಡೆಯಾಯಿತು. ಮೈಗೆ ಹುಷಾರಿಲ್ಲದೇ ಇದ್ದರೂ ಅವರು ಧೈರ್ಯದಿಂದ ಪರೀಕ್ಷೆ ಎದುರಿಸಿದ್ದರು.
ಪ್ರಸ್ತುತ ಅವರು ಶೇ 97.96ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ. ಚದುರಂಗ ಸ್ಪರ್ಧೆಯಲ್ಲಿ ಆಸಕ್ತಿ ಹೊಂದಿರುವ ಅವರು ಅಲ್ಲಿಯೂ ಸಹ ಹಲವು ಪ್ರಶಸ್ತಿ ಪಡೆದಿದ್ದಾರೆ. ಪೂಜಾ ಅವರ ಸಾಧನೆ ಅಂಜುಮಾನ್ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ.