ಗೋಕರ್ಣದಿಂದ ಕುಮಟಾಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ಸು ಸ್ಕೂಟಿಗೆ ಗುದ್ದಿದ್ದು (Accident) ಇದರಿಂದ ಸ್ಕೂಟಿ ಓಡಿಸುತ್ತಿದ್ದ ಮೂಡಂಗಿಯ ರವಿ ಪರಮೇಶ್ವರ ನಾಯ್ಕ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಮಿರ್ಜಾನ್ ಕೋಟೆಯ ಬಳಿ ಈ ಅಪಘಾತ ನಡೆದಿದೆ. ರವಿ ನಾಯ್ಕ ತರಕಾರಿ ತರುವುದಕ್ಕಾಗಿ ಪೇಟೆಗೆ ಬಂದಿದ್ದರು. ತರಕಾರಿ ಖರೀದಿಸಿ ಮನೆಗೆ ಮರಳುತ್ತಿರುವಾಗ ಅವರಿಗೆ ಬಸ್ಸು ಗುದ್ದಿದೆ. ಅಪಘಾತದ ರಭಸಕ್ಕೆ ಸ್ಕೂಟಿ ಬಸ್ಸಿನ ಚಕ್ರದ ಅಡಿ ಸಿಲುಕಿಕೊಂಡಿದ್ದು, ಸ್ಥಳೀಯರು ಇದನ್ನು ಹೊರತೆಗೆದರು.
ಈ ಭಾಗದಲ್ಲಿ ಸಾಕಷ್ಟು ಅಪಘಾತ ನಡೆಯುತ್ತಿದ್ದು, ಅಪಘಾತ ತಡೆಗೆ ಮುನ್ನಚ್ಚರಿಕೆವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.