
ಗುಡ್ಡ ಕುಸಿತ (Landslide) ಉಂಟಾಗಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಸಂಚಾರವನ್ನು ಸ್ಥಗಿತಗೊಳಿಸಿದ ಹೊನ್ನಾವರದ ನಾಜಗಾರ್ ಕ್ರಾಸಿನ ಬಳಿ ಅತಿವೇಗದಿಂದ ಲಾರಿ ಓಡಿಸಿಕೊಂಡು ಬಂದ ಹಿರೆಅಂಗಡಿಯ ನೂರ್ ಅಹ್ಮದ್ ಎಂಬಾತ ಶ್ರೀಧರ ಗಣಪತಿ ಅಂಬಿಗ ಅವರಿಗೆ ಅಪಘಾತಪಡಿಸಿದ ಪರಿಣಾಮ ಶ್ರೀಧರ ಅಂಬಿಗ ಗಾಯಗೊಂಡಿದ್ದಾರೆ.
ಈ ಪ್ರದೇಶದ ಎರಡು ರಸ್ತೆಗಳ ಪೈಕಿ ಒಂದು ರಸ್ತೆಯ ಓಡಾಟ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಇನ್ನೊಂದು ರಸ್ತೆ ಮೂಲಕ ಎರಡು ಕಡೆಯ ವಾಹನ ಓಡಾಟ ನಡೆಯುತ್ತಿದ್ದು, ಅಗಸ್ಟ 16ರ ಸಂಜೆ ಶ್ರೀಧರ ಅಂಬಿಗ ಬೈಕಿನಲ್ಲಿ ಹೋಗುತ್ತಿದ್ದರು. ಆಗ ಭಟ್ಕಳದಿಂದ ಹೊನ್ನಾವರ ಕಡೆ ಹೋಗುತ್ತಿದ್ದ ಲಾರಿ ಹಿಂದಿನಿoದ ಅವರ ಬೈಕಿಗೆ ಗುದ್ದಿದೆ. ಪರಿಣಾಮ ಶ್ರೀಧರ ಅಂಬಿಗ ಬೈಕ್ಸಹಿತ ಡಿವೈಡರ್ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಶ್ರೀಧರ ಅಂಬಿಗ ಹೊನ್ನಾವರ ಮಾಳ್ಕೋಡಿನವರು.