ಹೊನ್ನಾವರದ ಚಂದಾವರ ಚರ್ಚ ಬಳಿ ವಾಸವಾಗಿದ್ದ ಪ್ರಕಾಶ ಡಿಯೋಗಾ ನರ್ಹೋನಾ (32) ಎಂಬಾತರು ( Missing ) ಕಾಣೆಯಾಗಿದ್ದಾರೆ.
ಜುಲೈ 27ರಂದು ಮಧ್ಯಾಹ್ನ 12ಗಂಟೆಗೂ ಮುನ್ನ ಅವರು ಮನೆಯಲ್ಲಿಯೇ ಇದ್ದರು. ಮಧ್ಯಾಹ್ನದ ನಂತರ ಅವರು ಕಾಣಲಿಲ್ಲ. ಈ ಬಗ್ಗೆ ಸಾಕಷ್ಟು ಹುಡುಕಾಟ ನಡೆಸಿದರೂ ಪ್ರಕಾಶ ಅವರ ಸುಳಿವು ಸಿಕ್ಕಿಲ್ಲ. ಹೀಗಾಗಿ ಅಗಸ್ಟ 16ರಂದು ಅವರ ಪತ್ನಿ ವೆಲೆನ್ಸಿಯಾ ನರ್ಹೋನಾ `ಪತಿಯನ್ನು ಹುಡುಕಿಕೊಡಿ\’ ಎಂದು ಪೊಲೀಸ್ ದೂರು ನೀಡಿದ್ದಾರೆ.