ಕಾರವಾರದ ನಗರಸಭೆ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆಗೆ ಕನ್ನಡಕವಿಲ್ಲ. ಮೂರ್ತಿಗೆ ಅಳವಡಿಸಿದ್ದ ಕನ್ನಡ ಉದುರಿಬಿದ್ದು, ವರ್ಷ ಕಳೆದರೂ ಹೊಸ ಕನ್ನಡಕ ಹಾಕಲು ನಗರಸಭೆ ಮುಂದಾಗಿಲ್ಲ.
ಅಗಸ್ಟ 15ರ ಸ್ವಾತಂತ್ರೋತ್ಸವದ ದಿನ ಗಾಂಧಿ ಪ್ರತಿಮೆಗೆ ನಗರಸಭೆ ಮಾಲಾರ್ಪಣೆಯನ್ನು ಸಹ ಮಾಡಿಲ್ಲ. ಆ ಭಾಗದಲ್ಲಿ ಸ್ವಚ್ಚತಾ ಕೆಲಸವನ್ನು ಸಹ ನಿರ್ವಹಿಸಿಲ್ಲ. ಹೀಗಾಗಿ ಗಾಂಧಿ ಪ್ರತಿಮೆ ಇರುವ ಪ್ರದೇಶ ಗಬ್ಬೆದ್ದಿದ್ದು, ಬೀದಿ ನಾಯಿಗಳ ಆವಾಸ ಸ್ಥಾನವಾಗಿ ಬದಲಾಗಿದೆ. ಇಡೀ ದಿನ ಬೀದಿ ದೀಪಗಳು ಉರಿಯುತ್ತಿರುತ್ತವೆ.
ಅಗಸ್ಟ 15ರಂದು ಗಾಂಧೀಜಿ ಪ್ರತಿಮೆಗೆ ನಗರಸಭೆ ಮಾಲಾರ್ಪಣೆ ಮಾಡದೇ ಇರುವುದನ್ನು ಅರಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಡಿ. ಎಸ್.ವಿಜಯಕುಮಾರ್ ಅವರು ಪ್ರತಿಮೆ ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಿದ್ದಾರೆ.