ಹೊನ್ನಾವರದ ಹೊದ್ಕೆಶಿರೂರಿನ ದೇವರು ಹನ್ಮಂತ ನಾಯ್ಕ (59) ಎದೆಉರಿಯಿಂದ ಸಾವನಪ್ಪಿದ್ದಾರೆ.
ಅಗಸ್ಟ 17ರಂದು ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ಅವರು ಮಧ್ಯಾಹ್ನ ಊಟಕ್ಕೆ ಮನೆಗೆ ಮರಳಿದ್ದರು. ಊಟ ಮಾಡುವ ಮುನ್ನ ಎದೆ ಉರಿಯುತ್ತಿರುವುದಾಗಿ ಪತ್ನಿ ಗಿರಿಜಾ ಬಳಿ ಹೇಳಿಕೊಂಡಿದ್ದರು. ಆಗ ಅಲ್ಲಿಗೆ ಬಂದ ಅವರ ಮಗ ರಾಘವೇಂದ್ರ `ಊಟ ಮಾಡಿದರೆ ಎಲ್ಲವೂ ಸರಿಯಾಗುತ್ತದೆ\’ ಎಂದು ಹೇಳಿ ಊಟ ಬಡಿಸಿದ್ದರು.
ಆದರೆ, `ಊಟ ಮಾಡಲು ಆಗುತ್ತಿಲ್ಲ\’ ಎಂದು ದೇವರು ನಾಯ್ಕ ಹೇಳಿದ್ದು, ಅಸ್ವಸ್ಥಗೊಂಡ ಅವರನ್ನು ರಾಘವೇಂದ್ರ ತನ್ನ ಚಿಕ್ಕಪ್ಪ ಲಕ್ಷö್ಮಣನ ಸಹಾಯ ಪಡೆದು ಆಸ್ಪತ್ರೆಗೆ ಸಾಗಿಸಿದರು. ದೇವರು ನಾಯ್ಕರನ್ನು ಪರೀಕ್ಷಿಸಿದ ವೈದ್ಯರು ದಾರಿ ಮದ್ಯೆಯೇ ಅವರು ಸಾವನಪ್ಪಿರುವ ಬಗ್ಗೆ ತಿಳಿಸಿದ್ದಾರೆ.