ಶಿರೂರು ( Shiruru ) ಗುಡ್ಡ ಕುಸಿತ ಪ್ರದೇಶದ ನದಿ ಆಳದಲ್ಲಿ ಶವ ಹುಡುಕಾಟ ನಡೆಸುತ್ತಿರುವ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಭಾನುವಾರದ ಕಾರ್ಯಾಚರಣೆಗೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಅವರು ಕದ್ದುಮುಚ್ಚಿ ನದಿ ಆಳಕ್ಕೆ ಇಳಿದಿದ್ದಾರೆ.
`ಜಗನ್ನಾಥ ನಾಯ್ಕರ ಹೆಣ್ಣು ಮಕ್ಕಳು ಅಳುತ್ತಿದ್ದಾರೆ. ಅವರನ್ನು ನೋಡಲಾಗುತ್ತಿಲ್ಲ. ಇಲ್ಲಿವರೆಗೆ ಬಂದು ಕೈ ಕಟ್ಟಿ ಕೂರುವುದು ಬೇಡ ಎಂದು ಅನುಮತಿ ಇಲ್ಲದೇ ಇದ್ದರೂ ನೀರಿಗೆ ಇಳಿದು ಹುಡುಕಾಟ ನಡೆಸುವೆ. ನನ್ನ ಜೀವಕ್ಕೆ ನಾನೇ ಹೊಣೆಯಾಗಿದ್ದು, ನನಗೆ ಏನೇ ತೊಂದರೆ ಆದರೂ ಸರ್ಕಾರ ನನ್ನ ಹೆಂಡತಿ ಮಕ್ಕಳಿಗೆ 1 ರೂ ಸಹ ಪರಿಹಾರ ಕೊಡುವುದು ಬೇಡ\’ ಎಂದು ಈಶ್ವರ ಮಲ್ಪೆ ವಿಡಿಯೋ ಹೇಳಿಕೆ ನೀಡಿ ನದಿಗೆ ಹಾರಿದ್ದಾರೆ.
ಶಿರೂರು ಗುಡ್ಡ ಕುಸಿದು ಗಂಗಾವಳಿ ನದಿ ಆಳಕ್ಕೆ ಭಾರೀ ಪ್ರಮಾಣದಲ್ಲಿ ಮಣ್ಣು ತುಂಬಿರುವುದರಿAದ ನದಿಯ ಅಲ್ಲಿನ ಶವಗಳನ್ನು ತೆಗೆಯುವುದು ಸವಾಲಾಗಿದೆ. ನದಿಯಲ್ಲಿ ಮಣ್ಣು ಮಿಶ್ರಿತ ನೀರಿದ್ದು, ನದಿ ಆಳದಲ್ಲಿ ಬ್ಯಾಟರಿ ಹಾಕಿ ಹುಡುಕಿದರೂ ಕಲ್ಲು-ಮರಗಳ ತುಂಡು ಬಿಟ್ಟು ಬೇರೆನೂ ಕಾಣಿಸುತ್ತಿಲ್ಲ. ಅಲ್ಲಿರುವ ಆಲದ ಮರದಡಿ ಶವ ಸಿಲುಕಿರುವ ಸಾಧ್ಯತೆ ಹೆಚ್ಚಿರುವ ಹಿನ್ನಲೆ ಇದೀಗ ಈಶ್ವರ ಮಲ್ಪೆ ಅವರ ತಂಡ ಆಲದ ಮರ ತೆಗೆಯುವ ಕಸರತ್ತು ನಡೆಸಿದೆ. ಕೇರಳದ ಲಾರಿ ಚಾಲಕ ಅರ್ಜುನ, ಸ್ಥಳೀಯರಾದ ಜಗನ್ನಾಥ ನಾಯ್ಕ ಹಾಗೂ ಗಂಗೆಕೊಳ್ಳದ ಲೋಕೇಶನ ಬಗ್ಗೆ ಹುಡುಕಾಟ ಮುಂದುವರೆದಿದೆ.