ವ್ಯಾಪಾರ ಮಳಿಗೆ ಅನುಮತಿಗೆ ಸಲ್ಲಿಸಿದ್ದ ಅರ್ಜಿ ವಿಲೆ ಮಾಡದ ಜೋಯಿಡಾದ ಅಖೇತಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ( PDO ) ದತ್ತಾತ್ರೇಯ ಸಿ ಅವರಿಗೆ ವಿಜಯ್ ಎಂಬಾತ ಜೀವ ಬೆದರಿಕೆ ಒಡ್ಡಿದ್ದು, ಪೊಲೀಸರು ಪ್ರಕರಣದ ವಿಚಾರಣೆ ಶುರು ಮಾಡಿದ್ದಾರೆ.
ವಿಜಯ ಎಂಬಾತ ತಿನೈಘಾಟಿನಲ್ಲಿ ಸಿಮೆಂಟ್ ಅಂಗಡಿ ನಡೆಸುತ್ತಿದ್ದು, ಅದರ ಪರವಾನಿಗೆ ನವೀಕರಣಕ್ಕೆ ಅರ್ಜಿ ಹಾಕಿದ್ದ. ಆದರೆ, ಆ ಮಳಿಗೆ ಆತನ ಹೆಸರಿನಲ್ಲಿ ಇಲ್ಲದ ಕಾರಣ ನವೀಕರಣಕ್ಕೆ ಪಿಡಿಒ ಒಪ್ಪಿರಲಿಲ್ಲ. ಇದರಿಂದ ಸಿಟ್ಟಾದ ವಿಜಯ್ `ಕೂಡಲೇ ಪರವಾನಿಗೆ ರಿನೆವಲ್ ಮಾಡಿ. ಇಲ್ಲವಾದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನೀವು ಮನೆಗೆ ಸಾಗುವ ದಾರಿ ನನಗೆ ಗೊತ್ತಿದೆ. ನಿಮ್ಮ ಮಗ ಬೆಳಗಾವಿಯಲ್ಲಿ ಶಿಕ್ಷಣ ಎಲ್ಲಿ ಕಲಿಯುತ್ತಾನೆ ಎಂಬುದು ಗೊತ್ತಿದೆ\’ ಎಂದು ಹೇಳಿದ್ದಾನೆ. ಜೊತೆಗೆ `ಕ್ಯಾಸಲರಾಕ್ ದಾರಿಯಲ್ಲಿ ಇನ್ನೂ ಮುಂದೆ ಹೇಗೆ ಓಡಾಡುತ್ತೀರಾ? ನಾನು ನೋಡುತ್ತೇನೆ\’ ಬೆದರಿಸಿದ್ದಾನೆ.
ರಾಮನಗರ ಪೊಲೀಸ್ ಠಾಣೆಗೆ ತೆರಳಿದ ಪಿಡಿಓ ಆತನ ವಿರುದ್ಧ ದೂರು ದಾಖಲಿಸಿ ಜೀವ ರಕ್ಷಣೆಗೆ ಮನವಿ ಮಾಡಿದ್ದಾರೆ.