ಗೋಕರ್ಣದ ( Gokarna ) ಮಹಾಬಲೇಶ್ವರ ದೇವಾಲಯದ ಅಂಚಿನಲ್ಲಿ ಚರಂಡಿ ನೀರು ಹರಿಯುತ್ತಿದ್ದು, ಭಕ್ತರು ದೇವಾಲಯಕ್ಕೆ ತೆರಳುವ ಮುನ್ನ ಕೊಳಚೆ ಮೆಟ್ಟಿ ಒಳಗೆ ಪ್ರವೇಶಿಸುತ್ತಿದ್ದಾರೆ.
ಇಲ್ಲಿನ ಪಶ್ಚಿಮ ದ್ವಾರದ ರಸ್ತೆಯ ಬಳಿ ಚರಂಡಿಯ ನೀರು ನೇರವಾಗಿ ರಸ್ತೆಗೆ ನುಗ್ಗುತ್ತಿದೆ. ಇದರ ಜೊತೆ ಗಬ್ಬು ವಾಸನೆ ಬೇರೆ. ಅದರಲ್ಲಿಯೂ ಮಳೆ ಬಂದಾಗ ಆಗುವ ಸಮಸ್ಯೆ ಅಷ್ಟಿಷ್ಟಲ್ಲ. ಈ ಭಾಗದಲ್ಲಿ ಕಾಲಿಗೆ ಚಪ್ಪಲಿ ಸಹ ಹಾಕದೇ ಓಡಾಡುವ ಭಕ್ತರು ಮೂಗು ಮುಚ್ಚಿಕೊಂಡು ದೇಗುಲ ಪ್ರವೇಶಿಸುತ್ತಿದ್ದಾರೆ.
ಸ್ಥಳೀಯ ಗ್ರಾ ಪಂ ಚರಂಡಿ ನಿರ್ವಹಣೆ ಸರಿಯಾಗಿ ಮಾಡದಿರುವುದು ಇಲ್ಲಿನ ಮೂಲ ಸಮಸ್ಯೆ. ಇದರೊಂದಿಗೆ ಹೊಲಸು ನೀರನ್ನು ಚರಂಡಿಗೆ ಬಿಡುವವರ ಪಾತ್ರವೂ ಅಷ್ಟೇ ಪ್ರಮಾಣದಲ್ಲಿದೆ.