ವಿಪರೀತ ಮದ್ಯ ಸೇವನೆ ( Drinks and death ) ಮಾಡುತ್ತಿದ್ದ ಕುಮಟಾ ದಿವಗಿ ಜಡ್ಡಿಮೂಲೆಯ ಸುರೇಶ ದೇಶಭಂಡಾರಿ (52) ಗಟಾರದಲ್ಲಿ ಬಿದ್ದು ಸಾವನಪ್ಪಿದ್ದಾರೆ.
ಅಗಸ್ಟ 17ರಂದು ಸಂಜೆ 7.30ಕ್ಕೆ ಸರಾಯಿ ಕುಡಿದು ಮನೆಗೆ ಮರಳುತ್ತಿದ್ದ ಅವರು ಜಡ್ಡಿಮೂಲೆಯ ಎ1 ಗ್ಯಾರೇಜಿನ ಬಳಿ ಗಟಾರಕ್ಕೆ ಬಿದ್ದಿದ್ದರು. ಇದರಿಂದ ತಲೆ, ಕಾಲಿಗೆ ಗಾಯವಾಗಿತ್ತು. ಈ ವಿಷಯ ತಿಳಿದ ಮನೆಯವರು ಅವರನ್ನು ಅಲ್ಲಿಂದ ಮನೆಗೆ ಕರೆತಂದು ಉಪಚಾರ ಮಾಡಿದ್ದರು. ತೀವೃ ಅಸ್ವಸ್ಥಗೊಂಡ ಹಿನ್ನಲೆ ರಾತ್ರಿ 8.15ಕ್ಕೆ ಆಸ್ಪತ್ರೆಗೆ ದಾಖಲಿಸಿದರು. ಆದರೆ, 1.20ರ ಸುಮಾರಿಗೆ ಸುರೇಶ ದೇಶಭಂಡಾರಿ ಸಾವನಪ್ಪಿದ ಬಗ್ಗೆ ವೈದ್ಯರು ಘೋಷಿಸಿದ್ದಾರೆ.