ಮನೆಯಂಗಳದಲ್ಲಿ ಆಟವಾಡುತ್ತಿದ್ದ ಅಬೂಬಕರ್ ನದಿಭಾಗ (14) ಎಂಬಾತ ಏಕಾಏಕಿ ಕಾಣೆಯಾಗಿದ್ದು ( Missing ) ಆತನನ್ನು ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗಿರುವ ಅನುಮಾನ ವ್ಯಕ್ತವಾಗಿದೆ.
ಕುಮಟಾ ತಾಲೂಕಿನ ಕಾಗಲ್ ಹಿಣಿಯ ಅಬೂಕರ್ 9ನೇ ತರಗತಿಯ ವಿದ್ಯಾರ್ಥಿ. ಈತ ಅಗಸ್ಟ 17ರ ಮಧ್ಯಾಹ್ನ 3ಗಂಟೆಯವರೆಗೂ ಮನೆಯಲ್ಲಿಯೇ ಇದ್ದ. ನಂತರ ಅಲ್ಲೆ ಸಮೀಪ ಆಡುತ್ತಿದ್ದವ ಏಕಾಏಕಿ ಕಣ್ಮರೆಯಾಗಿದ್ದಾನೆ. ಈವರೆಗೂ ಆತ ಮನೆಗೆ ಮರಳಿಲ್ಲ.
ಆತನ ತಾಯಿ ಶರೀಪಾ ನದಿಭಾಗ ಎಲ್ಲಾ ಕಡೆ ಹುಡುಕಿದರೂ ಆತ ಸಿಕ್ಕಿಲ್ಲ. ತನ್ನ ಮಗನನ್ನು ದುಷ್ಕರ್ಮಿಗಳು ಅಪಹರಿಸಿರುವ ಶಂಕೆಯಿರುವುದಾಗಿ ಶರೀಪಾ ನದಿಭಾಗ ಪೊಲೀಸ್ ದೂರು ನೀಡಿದ್ದು, ಆತನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.