ಅಗಸ್ಟ 18ರ ಸಂಜೆ 6.15ಕ್ಕೆ ಸರಾಯಿ ( Illegal liquor ) ಕುಡಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಣ ಈತ ಸರಾಯಿ ಕುಡಿಯಲು ಲೈಸನ್ಸ ಪಡೆದಿರಲಿಲ್ಲ!
ಹೊನ್ನಾವರದ ತಾಳಮಕ್ಕಿ ಬೋಳೆಬಸ್ತಿ ಅಣ್ಣಪ್ಪ ಚೋಳಪ್ಪ ನಾಯ್ಕ ಎಂಬಾತ ಅನಂತವಾಡಿಯ ಬಿಎಸ್ಎನ್ಎಲ್ ಟವರ್ ಬಳಿ ಸರಾಯಿ ( Illegal liquor ) ಕುಡಿಯುತ್ತಿದ್ದ. ಆಗ ದಾಳಿ ನಡೆಸಿದ ಪಿಎಸ್ಐ ಭರತಕುಮಾರ್ ಆತನನ್ನು ವಶಕ್ಕೆ ಪಡೆದರು.
ಮದ್ಯ ಸೇವನೆಗೆ ಮೀಸಲಿರುವ ಜಾಗದಲ್ಲಿ ಸರಾಯಿ ಕುಡಿದರೆ ಪೊಲೀಸರು ಈ ಕ್ರಮ ಜರುಗಿಸುತ್ತಿರಲಿಲ್ಲ. ಅಥವಾ ಆತ ತನ್ನ ಮನೆಯಲ್ಲಿ ಸರಾಯಿ ಕುಡಿಯುತ್ತಿದ್ದರೂ ಆತನ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಅವಕಾಶ ಇರಲಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಕುಡಿಯುವುದು ನಿಷೇಧ. ಹೀಗಿದ್ದರೂ ಆತನ ಬಿಎಸ್ಎನ್ಎಲ್ ಟವರ್ ಬಳಿ ನಿಯಮ ಮೀರಿ, ಅನಧಿಕೃತವಾಗಿ ಸರಾಯಿ ( Illegal liquor )ಕುಡಿಯುತ್ತಿದ್ದ ಕಾರಣ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ಅಬಕಾರಿ ಕಾಯ್ದೆ ಅಡಿ ಅಣ್ಣಪ್ಪ ಚೋಳಪ್ಪ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.