ಶಿಕ್ಷಣಾಧಿಕಾರಿಗಳ ವಾಹನ ಸಹ ಹೋಗಲಿಕ್ಕಾಗದಂಥ ಊರು ಕುಮಟಾದ ಮೇದಿನಿ. ಅಲ್ಲಿನ ಸರ್ಕಾರಿ ಶಾಲೆ ಕುಸಿತ ( School ) ಕಂಡಿದ್ದು, ಶಿಕ್ಷಕರ ಮುನ್ನಚ್ಚರಿಕಾ ಕ್ರಮದಿಂದ ಮಕ್ಕಳ ಜೀವ ಉಳಿದಿದೆ.
60 ವರ್ಷ ಹಿಂದೆ ನಿರ್ಮಿಸಿದ ಮಣ್ಣಿನ ಗೋಡೆಯ ಶಾಲೆ ಇದಾಗಿದ್ದು, ಶಾಲೆಯ ( School ) ಗೋಡೆ ಬಿರುಕು ಮೂಡಿದ್ದನ್ನು ಶಿಕ್ಷಕರು ಗಮನಿಸಿದ್ದರು. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಮಕ್ಕಳನ್ನು ಬೇರೆಡೆ ಕರೆದೊಯ್ದು ಪಾಠ ಮಾಡುತ್ತಿದ್ದರು. ಮಳೆಗಾಲದ ಅವಧಿಯಲ್ಲಿ ಶಾಲೆ ಕುಸಿಯುವ ಸಾಧ್ಯತೆಗಳಿರುವ ಬಗ್ಗೆ ಪಾಲಕರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಸಮೀಪದ ಸಮುದಾಯ ಭವನದಲ್ಲಿ ಮಕ್ಕಳ ಕಲಿಕೆ ನಡೆದಿತ್ತು.
ಪ್ರಸ್ತುತ ಮೇದಿನಿ ಶಾಲೆಯ ( School ) ಗೋಡೆ ಮುರಿದು ಬಿದ್ದಿದೆ. ಮೇಲ್ಚಾವಣಿ ಕುಸಿದಿದೆ. ಅಳವಡಿಸಿದ್ದ ಹಂಚುಗಳೆಲ್ಲವೂ ನೆಲಕ್ಕೆ ಅಪ್ಪಳಿಸಿದೆ. ಈ ಅವಧಿಯಲ್ಲಿ ಶಾಲಾ ಒಳಗೆ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದೆ. ಮೇದಿನಿ ಗ್ರಾಮಕ್ಕೆ ತೆರಳಲು ರಸ್ತೆಯಿಲ್ಲ. ಕಾಲುದಾರಿ ಮಾತ್ರ ಇದ್ದಿದ್ದರಿಂದ ಶಿಕ್ಷಣಾಧಿಕಾರಿಗಳ ವಾಹನ ಸಹ ಇಲ್ಲಿ ಹೋಗಲ್ಲ.
`ಮೇದಿನಿ ಶಾಲೆಯ ಹಳೆಯ ಕಟ್ಟಡ ಶಿಥಿಲಗೊಂಡ ಕಾರಣ ಹೊಸ ಕಟ್ಟಡ ಮಂಜೂರಿಯಾಗಿದ್ದು, ಮಕ್ಕಳ ಕಲಿಕೆಗೆ ಬೇರೆಡೆ ವ್ಯವಸ್ಥೆ ಮಾಡಲಾಗಿದೆ\’ ಎಂದು ಶಿಕ್ಷಣಾಧಿಕಾರಿ ಆರ್ ಎಲ್ ಭಟ್ಟ ಮಾಹಿತಿ ನೀಡಿದರು.