ಉತ್ತರ ಕನ್ನಡ ಜಿಲ್ಲಾ ಪಂಚಾಯತ ಯೋಜನಾಧಿಕಾರಿಯಾಗಿರುವ ( Best officer ) ವಿನೋದ್ ಅಣ್ವೇಕರ್ ಭಾನುವಾರ ಅಂಗನವಾಡಿ – ಶಾಲೆಗಳ ಅನುಕೂಲಕ್ಕಾಗಿ ತಮ್ಮ ಸ್ವಂತ ವೆಚ್ಚದಲ್ಲಿ ಹಲವು ಗಿಡಗಳನ್ನು ವಿತರಿಸಿದ್ದಾರೆ. ಶಾಲೆಗಳಲ್ಲಿ ನಡೆಯುವ ಬಿಸಿಯೂಟ ಹಾಗೂ ಪೌಷ್ಠಿಕ ಆಹಾರ ವಿತರಣೆಗಾಗಿ ಅವರು ಈ ಸೇವೆ ಸಲ್ಲಿಸಿದ್ದಾರೆ.
ಹಳಿಯಾಳದಿಂದ ಮಾವು ಹಾಗೂ ತೆಂಗಿನ ಗಿಡಗಳನ್ನು ತರಿಸಿಕೊಂಡ ಅವರು ಅಂಕೋಲಾ ತಾಲೂಕಿನ 35 ಅಂಗನವಾಡಿಗಳಿಗೆ ಅದನ್ನು ವಿತರಿಸಿದ್ದಾರೆ. `ಈ ಗಿಡಗಳನ್ನು ಕಾಳಜಿಯಿಂದ ಆರೈಕೆ ಮಾಡಿ ಅದರ ಫಲವನ್ನು ಮಕ್ಕಳಿಗೆ ವಿತರಿಸಬೇಕು\’ ಎಂದು ಅವರು ಅಧೀನ ಅಧಿಕಾರಿಗಳಿಗೆ (Best officer ) ಪ್ರೀತಿಯಿಂದಲೇ ತಾಕೀತು ಮಾಡಿದ್ದಾರೆ. ಈ ವೇಳೆ ಜೊತೆಯಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿರೂಪಾಕ್ಷ ಪಾಟೀಲ್, ಅಂಕೋಲಾ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನೀಲ್ ಎಂ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ ಜಿ ಭಟ್ ಇದಕ್ಕೆ ತಲೆಯಾಡಿಸಿ, ಗಿಡಗಳ ಆರೈಕೆಯ ಹೊಣೆ ಹೊತ್ತಿದ್ದಾರೆ.
ಈ ಹಿಂದೆ ಸಹ ವಿನೋದ ಅಣ್ವೇಕರ್ ತಮ್ಮ ತಂದೆ ಶಿಕ್ಷಕರಾಗಿದ್ದ ಶಾಲೆಗೆ ಹಲವು ಕೊಡುಗೆ ನೀಡಿದ್ದು, ಈ ಬಗ್ಗೆ `S News ಡಿಜಿಟಲ್\’ ಜುಲೈ 1ರಂದು ವರದಿ ಪ್ರಕಟಿಸಿತ್ತು. ಆ ವರದಿ ಇಲ್ಲಿ ಓದಿ…
https://sirinews.in/avrsaschool/