ಮೂರು ತಿಂಗಳ ಹಿಂದೆಯೇ ಮಳೆಗಾಲದ ಮುನ್ನಚ್ಚರಿಕಾ ಕ್ರಮಗಳನ್ನು ( Work ) ಕೈಗೊಳ್ಳುವಂತೆ ಸೂಚಿಸಿದರೂ ಕೆಲ ಗ್ರಾಮ ಪಂಚಾಯತ ಅಧಿಕಾರಿಗಳು ಅಸಡ್ಡೆ ತೋರಿದ ಬಗ್ಗೆ ಯಲ್ಲಾಪುರ ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಧನವಾಡಕರ ಅಸಮಧಾನ ವ್ಯಕ್ತಪಡಿಸಿದರು.
ಸೋಮವಾರ ಅಧೀನ ಅಧಿಕಾರಿಗಳ ಸಭೆ ನಡೆಸಿದ ಅವರು `ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮುಂದಿನ ಮೂರು ದಿನಗಳ ಒಳಗೆ 300 ಹಣ್ಣಿನ ಗಿಡಗಳನ್ನು ನೆಡಬೇಕು. ಮಳೆನೀರು ಕೊಯ್ಲು ಘಟಕ, ಕೊಳವೆ ಬಾವಿ ಮರುಪೂರಣ ಘಟಕ ಮಗಾರಿ, ಶಾಲಾ ಕಾಂಪೌ0ಡ್, ಶೌಚಾಲಯ, ಆಟದ ಮೈದಾನ, ಅಡುಗೆ ಕೋಣೆ ಹಾಗೂ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಆದ್ಯತೆ ಕೊಡಬೇಕು\’ ಎಂದು ಸೂಚಿಸಿದರು. ನರೆಗಾ ಅಡಿ ಜನರಿಗೆ ಕೂಲಿ ಕೆಲಸ ಒದಗಿಸುವ ಕಾರ್ಯವಾಗಬೇಕು\’ ಎಂದು ತಿಳಿಸಿದರು.
`ಮಳೆಗಾಲ ಮುಗಿಯುವ ಹಂತದಲ್ಲಿದ್ದು, ನರೇಗಾದಡಿ ನಿಗದಿತ ಮಾನವ ದಿನ ಸೃಜನೆಗೆ ಹೆಚ್ಚಿನ ಒತ್ತು ಕೊಡಬೇಕು. ಸಾರ್ವಜನಿಕ ದೂರುಗಳ ನಿವಾರಣೆ, ಕಾಮಗಾರಿಗಳ ಬಿಲ್ ಹಾಗೂ ಕೂಲಿ ಮೊತ್ತ ಪಾವತಿ ಬಗ್ಗೆ ಗಮನರಹಿಸಬೇಕು\’ ಎಂದು ಸೂಚಿಸಿದರು.