
ಶಿರಸಿ: ಸೊರಬಾ – ಬನವಾಸಿ ರಸ್ತೆಯಲ್ಲಿ ಕಾರು ಓಡಿಸುತ್ತಿದ್ದ ಬೆಳಗಾವಿಯ ವಕೀಲ ಸೂರಜ್ ಶಿವಪ್ಪ ಆನೂರುಶೆಟ್ರು ಎಂಬಾತರ ಕಾರಿಗೆ ಇಬ್ರಾಹಿಂ ಸಯ್ಯದ್ ಎಂಬಾತ ತನ್ನ ಬೈಕ್ ಗುದ್ದಿದ್ದು, ಪರಿಣಾಮ ಬೈಕ್ ಸವಾರನ ಜೊತೆ ಹಿಂಬದಿ ಸವಾರ ಸುಪಿಯಾನ್ ಸಯ್ಯದ್ ಎಂಬಾತನೂ ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಗಸ್ಟ 18ರ ಸಂಜೆ 5ಗಂಟೆ ವೇಳೆಗೆ ಸೊರಬಾ ಬನವಾಸಿ ರಸ್ತೆಯ ಅಜ್ಜರಣಿ ಕ್ರಾಸ್ ಬಳಿ ಈ ಅಪಘಾತ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯರು ಉಪಚರಿಸಿ ಶಿರಸಿಯ ಪಂಡಿತ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್ ಚಾಲಕನ ತಲೆಗೆ ಪೆಟ್ಟಾಗಿದ್ದು, ಸಹ ಸವಾರನ ಕಾಲು-ತೊಡೆಗೆ ಗಾಯವಾಗಿದೆ.
ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ವಕೀಲರ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.