ಹಳಿಯಾಳದ ಶಿಕ್ಷಕ ( Teacher ) ಜಯಶೀಲ ವಿಠ್ಠಲ ಬಾಂಗಡಿ ಅವರ ಮನೆಯಲ್ಲಿ ಕಳ್ಳತನ ( Theft ) ನಡೆದಿದೆ.
ಹೆಸ್ಕಾಂ ಕಚೇರಿ ಹಿಂದೆ ವಾಸವಾಗಿದ್ದ ಅವರು ಅಗಸ್ಟ 17ರಂದು ಸಂಜೆ ಕೆಲಸದ ನಿಮಿತ್ತ ಮೂಡಬಿದರೆಗೆ ಹೋಗಿದ್ದರು. ಅಗಸ್ಟ 19ರಂದು ಬೆಳಗ್ಗೆ ಮನೆಗೆ ಮರಳಿದಾಗ ಮನೆಯ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಒಳಗೆ ಹೋಗಿ ಪರಿಶೀಲಿಸಿದಾಗ ಕಳ್ಳರು ಕಪಾಡು ಒಡೆದು ಅಲ್ಲಿದ್ದ 80 ಸಾವಿರ ದೋಚಿರುವುದು ( Theft ) ಗೊತ್ತಾಗಿದೆ. ಈ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದು, ಕಳ್ಳರನ್ನು ಪತ್ತೆ ಮಾಡಿ ತಮ್ಮ ಹಣ ಮರಳಿಸುವಂತೆ ಮನವಿ ಮಾಡಿದ್ದಾರೆ.