ಹೊನ್ನಾವರ: ನವೀಲುಗೋಣದಲ್ಲಿ ಮನೆ ನಿರ್ಮಿಸುತ್ತಿರುವ ( House construction ) ಗೀತಾ ಹಾಗೂ ಭಾಸ್ಕರ್ ನಾಯ್ಕ ಅವರಿಗೆ ದಾರಿ ಸಮಸ್ಯೆ ಎದುರಾಗಿದೆ. ಶ್ರೀಧರ ನಾರಾಯಣ ಮಡಿವಾಳ ಎಂಬಾತ ದಾರಿಗೆ ಗೇಟ್ ಅಳವಡಿಸಿ ಬೀಗ ಹಾಕಿದ್ದು, `ಈ ರಸ್ತೆಯಲ್ಲಿ ಓಡಾಡಿದರ ಜೀವ ತೆಗೆಯುವೆ\’ ಎಂದು ಅವರಿಬ್ಬರಿಗೂ ಬೆದರಿಕೆ ಹಾಕಿದ್ದಾನೆ.
ದಾರಿ ವಿಷಯವಾಗಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದ್ದು, ಈ ನಡುವೆ ಆತ ಬೀಗ ಹಾಕಿ ಓಡಾಡುವುದಕ್ಕೆ ಅಡ್ಡಿ ನಡೆಸಿದ ವಿಷಯವಾಗಿ ಅಗಸ್ಟ 19ರಂದು ವಾಗ್ವಾದ-ಹಲ್ಲೆ ನಡೆದಿದೆ. ಈ ಮಾರ್ಗದಲ್ಲಿ ಗೀತಾ ಹಾಗೂ ಭಾಸ್ಕರ ಇಬ್ಬರು ಹೋಗುತ್ತಿದ್ದಾಗ ಅಡ್ಡಗಡ್ಡಿದ ಶ್ರೀಧರ `ಇನ್ಮುಂದೆ ಈ ದಾರಿಯಲ್ಲಿ ತಿರುಗಾಡಬಾರದು\’ ಸೂಚನೆ ನೀಡಿ ಜಗಳಕ್ಕೆ ಬಂದಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಭಾಸ್ಕರನ ಮೇಲೆ ಹಲ್ಲೆ ನಡೆಸಿದ್ದು, ಆಗ ಭಾಸ್ಕರನ ಪತ್ನಿ ಗೀತಾ ಗಂಡನನ್ನು ತಪ್ಪಿಸಿದ್ದಾರೆ. ಆಗ ಶ್ರೀಧರ್ ಗೀತಾರನ್ನು ಉದ್ದೇಶಿಸಿ `ಮಾನಭಂಗ ಮಾಡಿ ಕೊಲೆ ಮಾಡುವೆ\’ ಎಂದು ಬೆದರಿಕೆ ಒಡ್ಡಿದ್ದಾನೆ. ಮನೆ ನಿರ್ಮಾಣಕ್ಕೆ ( House construction ) ಮೂರನೇ ವ್ಯಕ್ತಿಯಿಂದ ಅನಗತ್ಯ ತೊಂದರೆ ಆಗುತ್ತಿರುವ ಬಗ್ಗೆ ಗೀತಾ ಪೊಲೀಸ್ ದೂರು ನೀಡಿದ್ದಾರೆ.