ಸಿದ್ದಾಪುರ: ಶೇಲೂರು ಕಲಗದ್ದೆಯ ಶ್ರೀಕಾಂತ ನಾಗಾ ದೇವಾಡಿಗ (35) ಎಂಬಾತರು ಮದ್ಯಪಾನದಿಂದ ಮಾನಸಿಕವಾಗಿ ಕುಗ್ಗಿದ್ದು ಇದೇ ಗುಂಗಿನಲ್ಲಿ ಕಾಡಿಗೆ ಹೋಗಿ ಜೀವ ( Suicide ) ಬಿಟ್ಟಿದ್ದಾನೆ.
ವಿಪರೀತ ಸರಾಯಿ ಕುಡಿಯುತ್ತಿದ್ದ ಶ್ರೀಕಾಂತ ಕಳೆದ 4 ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಕೆಲ ದಿನಗಳಿಂದ ರಾತ್ರಿ ಹೊತ್ತು ಒಬ್ಬನೇ ಮಾತನಾಡುವುದನ್ನು ಈತ ರೂಡಿಸಿಕೊಂಡಿದ್ದ. ಅಗಸ್ಟ 19ರಂದು ಮನೆಯಿಂದ 500 ಮೀ ದೂರದ ಬರುನಬೆಟ್ಟಕ್ಕೆ ಹೋದ ಈತ ಅಲ್ಲಿದ್ದ ಮರಕ್ಕೆ ನೇಣು ( Suicide ) ಹಾಕಿಕೊಂಡಿದ್ದಾನೆ.