73 ವರ್ಷದ ಗಣಪತಿ ಶಿವರಾಮ ಭಟ್ಟ ಹಾಗೂ 50 ವರ್ಷದ ರಾಮಕೃಷ್ಣ ವೆಂಕಟ್ರಮಣ ಭಟ್ಟ ಯಲ್ಲಾಪುರ ತಾಲೂಕಿನ ಇಡಗುಂದಿಯ ಕೋಮಡಿಯಲ್ಲಿ ಅಕ್ಕ-ಪಕ್ಕದ ಜಮೀನು ( Land issues )ಮಾಲಕರಾಗಿದ್ದು ನಡುವೆ ಹರಿದ ಹಳ್ಳಕ್ಕೆ ಕಾಲು ಸಂಕ ನಿರ್ಮಿಸುವ ವಿಷಯ ಈ ಇಬ್ಬರ ನಡುವಿನ ಹೊಡೆದಾಟಕ್ಕೆ ಕಾರಣವಾಗಿದೆ.
ಜಮೀನಿಗೆ ತಿರುಗಾಡುವ ದಾರಿಯಲ್ಲಿದ್ದ ಹಳ್ಳಕ್ಕೆ ಅಡ್ಡಲಾಗಿ ಕಾಲು ಸಂಕ ನಿರ್ಮಿಸುವ ವಿಷಯವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ( Land issues ) ಹಳ್ಳಕ್ಕೆ ಅಡ್ಡಲಾಗಿ ಕಾಲುಸಂಕ ನಿರ್ಮಿಸುವುದು ಅನಿವಾರ್ಯ ಎಂದು ಗಣಪತಿ ಭಟ್ಟ ವಾದಿಸಿದ್ದರು. ಅಲ್ಲಿ ಸಂಕ ನಿರ್ಮಿಸಿದರೆ ತನ್ನ ಜಮೀನಿಗೆ ನೀರು ನುಗ್ಗುತ್ತದೆ ಎಂದು ರಾಮಕೃಷ್ಣ ಭಟ್ಟ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು.
`S News ಡಿಜಿಟಲ್\’
ಅಗಸ್ಟ 17ರಂದು ಕಾಲು ಸಂಕ ನಿರ್ಮಿಸುವ ಬಗ್ಗೆ ಗಣಪತಿ ಭಟ್ಟರು ಪ್ರಮೋದ ಶಿವರಾಮ ಹೆಗಡೆ ಅವರನ್ನು ಸ್ಥಳಕ್ಕೆ ಕರೆದೊಯ್ದು ವಿಚಾರಿಸುತ್ತಿದ್ದರು. ಆಗ ಅಲ್ಲಿಗೆ ಬಂದ ರಾಮಕೃಷ್ಣ ಭಟ್ಟರು ಇಲ್ಲಿ ಕಾಲುಸಂಕ ನಿರ್ಮಿಸಬಾರದು ಎಂದು ತಾಕೀತು ಮಾಡಿದ್ದರು. ಅದಕ್ಕೆ ಒಪ್ಪದಿದ್ದಾಗ ಗಣಪತಿ ಭಟ್ಟರಿಗೆ ಕೆಟ್ಟದಾಗಿ ಬೈದು ಕೈಯಲ್ಲಿದ್ದ ಗುದ್ದಲಿಯ ಕಾವಿನಿಂದ ಬೆನ್ನಿಗೆ ಗುದ್ದಿದ್ದರು.
ಪರಿಣಾಮ ಗಣಪತಿ ಭಟ್ಟರು ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು, ಆಗ ರಾಮಕೃಷ್ಣ ಭಟ್ಟರು `ಈಗ ಇಷ್ಟಕ್ಕೆ ಬಿಡುತ್ತೇನೆ. ಮತ್ತೆ ಸಿಕ್ಕರೆ ಜೀವಸಹಿತ ಉಳಿಸುವುದಿಲ್ಲ\’ ಎಂದು ಬೆದರಿಕೆ ಒಡ್ಡಿದ ಬಗ್ಗೆ ಗಣಪತಿ ಭಟ್ಟರು ಪೊಲೀಸರಿಗೆ ದೂರಿದ್ದಾರೆ.
`S News ಡಿಜಿಟಲ್\’