ಉತ್ತರ ಕನ್ನಡ ಜಿಲ್ಲೆಯಲ್ಲಿರುವ 5 ವರ್ಷ ಮೇಲ್ಪಟ್ಟ ಹಾಗೂ 15 ವರ್ಷ ಒಳಗಿನ ಎಲ್ಲಾ ಮಕ್ಕಳ ಆಧಾರ್ ಕಾರ್ಡುಗಳಿಗೆ ಬಯೋಮೆಟ್ರಿಕ್ ಅಪ್ಡೇಟ್ ( Aadhaar update ) ಮಾಡಿಸುವುದು ಕಡ್ಡಾಯವಾಗಿದೆ.
S News ಡಿಜಿಟಲ್
`ಈ ಬಗ್ಗೆ ಶಿಕ್ಷಣ ಇಲಾಖೆ ತ್ವರಿತ ಕ್ರಮ ಜರುಗಿಸಬೇಕು\’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ. `ಯಾವುದೇ ಮಗು ಇದರಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು. ಎಲ್ಲಾ ಶಾಲಾ ವಿದ್ಯಾರ್ಥಿಗಳ ಆಧಾರ್ ಬಯೋಮೆಟ್ರಿಕ್ ಮಾಡಿಸುವ ಬಗ್ಗೆ ಶಿಬಿರಗಳನ್ನು ಆಯೋಜಿಸಬೇಕು\’ ಎಂದು ಬುಧವಾರದ ಸಭೆಯಲ್ಲಿ ಅವರು ಹೇಳಿದರು. ಶಾಲಾ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಅಪ್ಡೇಟ್ ( Aadhaar update ) ಆಗದೇ ಇದ್ದಲ್ಲಿ ಸರ್ಕಾರದಿಂದ ಅವರಿಗೆ ದೊರೆಯಬೇಕಾದ ಸೌಲಭ್ಯಗಳಿಗೆ ತೊಂದರೆಯಾಗಲಿದೆ. ಶಾಲಾ ಮಕ್ಕಳ ಹೆಸರುಗಳಲ್ಲಿ ತಪ್ಪುಗಳಿದ್ದಲ್ಲಿ ಅದನ್ನು ಸರಿಪಡಿಸುವ ಕುರಿತಂತೆ ಶಿಕ್ಷಣಾಧಿಕಾರಿಗಳು ಈಗಾಗಲೇ ನೀಡಿರುವ ಅರ್ಜಿ ನಮೂನೆಯಲ್ಲಿ ಸರಿಯಾದ ಹೆಸರನ್ನು ಭರ್ತಿ ಮಾಡಿ, ದೃಢೀಕರಿಸಿ ಸಲ್ಲಿಸಿಸಬೇಕು\’ ಎಂದು ಸೂಚಿಸಿದರು.
ಅಪ್ಡೇಟ್ ಮಾಡದೇ ಇದ್ದವರು ಇಷ್ಟು ಜನ
ಜಿಲ್ಲೆಯಲ್ಲಿ ಒಟ್ಟು 16,43,471 ಆಧಾರ್ ಸಂಖ್ಯೆ ಜನರೇಟ್ ಆಗಿದ್ದು, ಇದರಲ್ಲಿ 5 ವರ್ಷದೊಳಗಿನವರು 49,985 ಮತ್ತು 5 ವರ್ಷ ಮೇಲ್ಪಟ್ಟ ಮತ್ತು 18 ವರ್ಷದೊಳಗಿನ 2,82,909 ಮತ್ತು 18 ವರ್ಷ ಮೇಲ್ಪಟ್ಟ 13,10,577 ಜನರಿದ್ದಾರೆ. 5 ವರ್ಷ ಮೇಲ್ಪಟ್ಟ 57,065 ಮತ್ತು 15 ವರ್ಷ ಮೇಲ್ಪಟ್ಟ 53,540 ಸೇರಿದಂತೆ ಒಟ್ಟು 1,10,605 ಆಧಾರ್ ಕಾರ್ಡ್ಗಳಿಗೆ ಬಯೋಮೆಟ್ರಿಕ್ ಮಾಡಿಸುವುದು ಇದುವರೆಗೆ ಬಾಕಿಯಿದೆ.
S News ಡಿಜಿಟಲ್
ಜಿಲ್ಲೆಯಲ್ಲಿರುವ ಆಧಾರ್ ಕಾರ್ಡ್ಗಳಲ್ಲಿ 15,38,406 ಕಾರ್ಡ್ ಗಳಿಗೆ ಮೊಬೈಲ್ ಸೀಡ್ ಆಗಿದ್ದು, 1,05,065 ಬಾಕಿ ಇದೆ. ಸ್ಯಾಟ್ಸ್ ತಂತ್ರಾoಶದ ಮೂಲಕ ಜಿಲ್ಲೆಯಲ್ಲಿರುವ 1,01,230 ವಿದ್ಯಾರ್ಥಿಗಳ ಆಧಾರ್ ಕಾರ್ಡ್ಗಳಲ್ಲಿ, 91,303 ವಿದ್ಯಾರ್ಥಿಗಳ ಆಧಾರ್ ಪರಿಶೀಲನೆ ಆಗಿದ್ದು, 88,147 ವಿದ್ಯಾರ್ಥಿಗಳ ಆಧಾರ್ ಯಶಸ್ವಿಯಾಗಿದೆ. 77,453 ವಿದ್ಯಾರ್ಥಿಗಳ ಹೆಸರು ಶೇ.100 ರಷ್ಟು ತಾಳೆಯಾಗಿದ್ದು, 13,083 ವಿದ್ಯಾರ್ಥಿಗಳ ಪರಿಶೀಲನೆ ಬಾಕಿ ಇದ್ದು, ಶೇ 87ರಷ್ಟು ಪ್ರಗತಿಯಾಗಿದೆ.