ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಗೊಂದಲ, ದಲ್ಲಾಳಿ ಹಾಗೂ ಬೆಳೆಗಾರರ ನಡುವಿನ ಕೆಲ ಅಹಿತಕರ ಘಟನೆಗಳನ್ನು ಖಂಡಿಸಿ ಯಲ್ಲಾಪುರದ ಅಡಿಕೆ ವರ್ತಕರು ಒಟ್ಟಾಗಿ ಅನಿರ್ಧಿಷ್ಟಾವಧಿ ಅವಧಿಗೆ ಅಡಿಕೆ ವಹಿವಾಟು ( Areca tenders ) ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಹಿನ್ನಲೆ ಮುಂದಿನ ನಿರ್ಣಯ ಪ್ರಕಟವಾಗುವವರೆಗೆ ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಡಿಕೆ, ಕಾಳು ಮೆಣಸು ಸೇರಿ ಯಾವುದೇ ವ್ಯಾಪಾರ-ವಹಿವಾಟು ಇರುವುದಿಲ್ಲ! S News ಡಿಜಿಟಲ್
ಕೆಲ ದಿನಗಳ ಹಿಂದೆ ಟಿಎಸ್ಎಸ್ ಸಂಸ್ಥೆಯಲ್ಲಿ ನಡೆದ ಅಡಿಕೆ ವ್ಯವಹಾರ ( Areca tenders ) ಸಾಕಷ್ಟು ಸದ್ದು ಮಾಡಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಗರಿಷ್ಟ ದರದಲ್ಲಿ ಅಡಿಕೆ ದರ ನಮೂದಿಸಿದರು ಅದನ್ನು ತಿದ್ದುಪಡಿ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಕೆಲ ರೈತರು ದೂರಿದ್ದರು. ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿ ಪ್ರಕರಣ ದಾಖಲಾಗಿದೆ. ವಿಚಾರಣೆ ಮುಂದುವರೆದಿದ್ದು, ಈ ವಿಷಯ ಅಡಿಕೆಯ ಮಾನ ಹರಾಜಿಗೆ ಮೂಲ ಕಾರಣವಾಗಿದೆ.
ಪ್ರಸ್ತುತ ಈ ಎಲ್ಲಾ ಗೊಂದಲಗಳನ್ನು ಬಗೆಹರಿಸಬೇಕು ಎಂಬ ನಿಟ್ಟಿನಲ್ಲಿ ಅಡಿಕೆ ವರ್ತಕರು ಎಪಿಎಂಸಿ\’ಗೆ ಪತ್ರ ನೀಡಿದ್ದಾರೆ. ದಲ್ಲಾಳಿಗಳು ಸಹ ಎಪಿಎಂಸಿ\’ಗೆ ಪತ್ರ ನೀಡಿದ್ದು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ದಲ್ಲಾಲರು, ರೈತರು ಹಾಗೂ ವ್ಯಾಪಾರಸ್ಥರ ನಡುವೆ ಎಪಿಎಂಸಿ ಸೇತುವೆಯಾಗಬೇಕು ಎಂಬುದು ಮುಖ್ಯ ಅಂಬೋಣ. `ಎಲ್ಲರೂ ಸೌಹಾರ್ಧತೆಯಿಂದ ಕೂಡಿ ಬಾಳಬೇಕು. ಅಹಿತಕರ ಘಟನೆಗಳು ಮುಂದುವರೆಯಬಾರದು\’ ಎಂಬುದೇ ಈ ಪ್ರತಿಭಟನೆಯ ಉದ್ದೇಶ ಎಂದು ಹಿರಿಯ ಅಡಿಕೆ ವ್ಯಾಪಾರಸ್ಥ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ ಮಾಹಿತಿ ನೀಡಿದರು. S News ಡಿಜಿಟಲ್
`ಯಾವುದೇ ವ್ಯತ್ಯಾಸ ಅಥವಾ ಸಮಸ್ಯೆ ಕಂಡುಬAದರೆ ರೈತರನ್ನು ವಿಶ್ವಾಸಕ್ಕೆ ಪಡೆದು ಅವರ ಮನವರಿಕೆ ಮಾಡಬೇಕು. ವ್ಯಾಪಾರಿ ಹಾಗೂ ದಲ್ಲಾಳಿಗಳಿಗೆ ಸಹ ಅನ್ಯಾಯವಾಗಬಾರದು. `ಶಿರಸಿ-ಸಿದ್ದಾಪುರ ಭಾಗದಲ್ಲಿ ದಲ್ಲಾಲರು ಹಾಗೂ ಎಪಿಎಂಸಿ ಸಿಬ್ಬಂದಿ ಒಟ್ಟಿಗೆ ಅಡಿಕೆ ಹರಾಜು ಅಂಗಳಕ್ಕೆ ಬಂದು ಟೆಂಡರ್ ಡಿಕ್ಲರ್ ಮಾಡುತ್ತಾರೆ. ಯಲ್ಲಾಪುರದಲ್ಲಿ ಸಹ ಇದೇ ಮಾದರಿ ಜಾರಿಗೆ ಬರಬೇಕು. ಆದ ಪಾರದರ್ಶಕ ಆಡಳಿತ ಸಾಧ್ಯ\’ ಎಂಬುದು ಅವರ ಅಭಿಪ್ರಾಯ.
`ಕೆಲವೊಮ್ಮೆ ಕಣ್ತಪ್ಪಿನಿಂದ ಚಾಕಾ ವ್ಯತ್ಯಾಸವಾದ ಉದಾಹರಣೆಗಳಿವೆ. ಕೆಂಪು ಅಡಿಕೆ ಪಕ್ಕದಲ್ಲಿ ಕೊಳೆ ಅಡಿಕೆ ಹಾಕಿದಾಗ ಕೆಂಪು ಅಡಿಕೆಯ ದರ ಕಣ್ತಪ್ಪಿನಿಂದ ಕೊಳೆ ಅಡಿಕೆಯ ಚಾಕಾಗೆ ಬರೆಯುವ ಸಾಧ್ಯತೆಗಳಿದ್ದು, ರೈತರಿಗೆ ಅದನ್ನು ಮನವರಿಕೆ ಮಾಡಿಕೊಡುವ ವ್ಯವಸ್ಥೆ ಬರಬೇಕು. ಆಗ ರೈತರು ಆ ಚಾಕವನ್ನು ವ್ಯಾಪಾರ ಮಾಡುವ ಅಥವಾ ರದ್ದು ಮಾಡುವ ಅವಕಾಶಗಳಿದ್ದು, ಸಹಬಾಳ್ವೆ ಸಾಧ್ಯ\’ ಎಂದವರು ವಿವರಿಸಿದರು. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳಿಗೆ ಪತ್ರ ನೀಡಿದ್ದು, ಈ ಎಲ್ಲಾ ಸಮಸ್ಯೆ ಬಗೆಹರಿಸುವವರೆಗೆ ಮುಷ್ಕರ ಮುಂದುವರೆಯಲಿದೆ\’ ಎಂದು ತಿಳಿಸಿದರು.
S News ಡಿಜಿಟಲ್