ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಸಿದ್ದಾಪುರದ ಹೆಗ್ಗೆಕೊಪ್ಪ ಅರಣ್ಯ ಪ್ರದೇಶಕ್ಕೆ ಬೇಟೆಗೆ ( Animal huntir ) ಆಗಮಿಸಿದ ನಾಲ್ವರಲ್ಲಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮೂವರು ಕಾಡಿನಲ್ಲಿ ಕಣ್ಮರೆಯಾಗಿದ್ದು ಅವರನ್ನು ಹಿಡಿಯುವ ಸಿದ್ಧತೆ ನಡೆಸಿದ್ದಾರೆ.
ಹೆಗ್ಗೆಕೊಪ್ಪ ಪುರದಮಠದ ಮಂಜುನಾಥ ಗಣಪತಿ ನಾಯ್ಕ (36) ( Animal huntir )ಬಂದೂಕು ಹಿಡಿದು ಕಾಡಿಗೆ ಹೋಗಿದ್ದ. ಆತನ ಜೊತೆ ಇನ್ನೂ ಮೂವರು ವಿವಿಧ ಸಲಕರಣೆಗಳನ್ನು ಹೊತ್ತು ಸಾಗಿದ್ದರು. ಆಗ ಅಲ್ಲಿ ಎದುರಾದ ಅರಣ್ಯ ಸಿಬ್ಬಂದಿ ಮುಂದೆ ಇದ್ದವನನ್ನು ಹಿಡಿದರು. ಉಳಿದವರು ತಪ್ಪಿಸಿಕೊಂಡರು. ಆತ ಕಾಡಿನ ಬಳಿ ಬರಲು ಬಳಸಿದ್ದ ಮಾರುತಿ ಕಾರ್, ಮೊಬೈಲ್ ಫೋನ್, ಚಾಕು ಮೊದಲಾದವು ಅರಣ್ಯ ಸಿಬ್ಬಂದಿಗೆ ಸಿಕ್ಕಿವೆ.