ಅಂಕೋಲಾ ಯಲ್ಲಾಪುರ ಗಡಿಭಾಗವಾದ ರಾಮನಗುಳಿ ಬಳಿ ಸೇತುವೆಗೆ ತೆರಳುವ ದಾರಿಯಲ್ಲಿ ( Road problems )ಡೋಂಗ್ರಿ ಗ್ರಾ ಪಂ ಕಸದ ವಾಹನ ನಿಂತು ಆರು ತಿಂಗಳು ಕಳೆದಿದ್ದು, ಇದನ್ನು ನೋಡಿ ಇತರರು ಸಹ ಸೇತುವೆ ಅಂಚಿನ ಎರಡೂ ಕಡೆ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಹೀಗಾಗಿ ಸೇತುವೆ ಮೇಲೆ ಓಡಾಡುವ ಅನೇಕರಿಗೆ ಸಮಸ್ಯೆಯಾಗಿದೆ. S News ಡಿಜಿಟಲ್
ಮೊದಲು ಇಲ್ಲಿ ತೂಗು ಸೇತುವೆ ಇತ್ತು. ತೂಗು ಸೇತುವೆ ಮೇಲೆ ದ್ವಿಚಕ್ರ ವಾಹನದ ಮೂಲಕ ಇಬ್ಬರು ಸಂಚರಿಸುವುದರಿoದ ಅಪಾಯ ಅರಿತ ಗ್ರಾ ಪಂ ಒಬ್ಬರ ಸಂಚಾರಕ್ಕೆ ಮಾತ್ರ ಅನುಮತಿ ನೀಡಿತ್ತು. ಆ ವೇಳೆ ಇಬ್ಬರು ಸಂಚರಿಸುವುದು ಕಂಡುಬoದರೆ ಸಾವಿರ ರೂ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನು ಗ್ರಾ ಪಂ ಅಧಿಕಾರಿಗಳು ನೀಡಿದ್ದರು. ಹೀಗಾಗಿ ಕಟ್ಟುನಿಟ್ಟಿನ ನಿಯಮ ಪಾಲನೆಯಾಗುತ್ತಿತ್ತು. ನೆರೆ ಪ್ರವಾಹದ ವೇಳೆ ಇಲ್ಲಿದ್ದ ತೂಗು ಸೇತುವೆ ಕುಸಿದು ಬಿದ್ದಿದ್ದು, ಗ್ರಾಮಸ್ಥರ ಬೇಡಿಕೆ ಮೇರೆಗೆ ನೂತನ ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ, ಸೇತುವೆಗೆ ತೆರಳುವ ರಸ್ತೆಯ ಎರಡು ಬದಿಯಲ್ಲಿ ಸಾಲು ಸಾಲು ವಾಹನ ನಿಲ್ಲುವುದರಿಂದ ಸುಗಮ ಓಡಾಟಕ್ಕೆ ( Road problems ) ಅಡಚಣೆಯಾಗಿದೆ.
ಪ್ರತಿ ದಿನ ನೂರಾರು ಜನ ರಾಮನಗುಳಿಗೆ ತೆರಳಿ ಬಸ್ ಹಿಡಿಯುತ್ತಾರೆ. ಹೀಗೆ ಹೋಗುವವರು ತಮ್ಮ ವಾಹನಗಳನ್ನು ರಸ್ತೆ ಅಂಚಿನಲ್ಲಿ ನಿಲ್ಲಿಸುತ್ತಾರೆ. ಹೀಗಾಗಿ ಸಾರ್ವಜನಿಕ ವಾಹನ ನಿಲುಗಡೆಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಊರಿನವರ ಆಗ್ರಹ. `ಕಸದ ವಾಹನ ಸುಸ್ಥಿತಿಯಲ್ಲಿದ್ದು, ಅದಕ್ಕೆ ಚಾಲಕರಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುವ ರೀತಿ ವಾಹನ ಇದ್ದರೆ ಅದನ್ನು ಬೇರೆ ಕಡೆ ನಿಲ್ಲಿಸಲಾಗುತ್ತದೆ\’ ಎಂದು ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಮಾದೇವ ಗೌಡ ತಿಳಿಸಿದರು.
S News ಡಿಜಿಟಲ್