`ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸೈಯದ್ ಅಲಿ ಸುದ್ರುದಿನ್ ಎಂಬಾತರು ರಸ್ತೆ ಅತಿಕ್ರಮಣ ( Govt road encroachment ) ನಡೆಸಿದ್ದು, ಈ ಬಗ್ಗೆ ಪ್ರಶ್ನಿಸಿದ ಕಾರಣ ಜೀವ ಬೆದರಿಕೆ ಒಡ್ಡಿದ್ದಾರೆ\’ ಎಂದು ಉದ್ಯಮನಗರದ ಬೇಬಿ ಆಯೇಷಾ ಶೇಖ್ ಇಸಾಕ್ ದೂರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಈ ರಸ್ತೆ ಅತಿಕ್ರಮಣದಿಂದ ತಮ್ಮ ಮನೆಗೆ ಹೋಗಲು ದಾರಿ ಇಲ್ಲ. ರಸ್ತೆ ಅತಿಕ್ರಮಣವಾದ ( Govt road encroachment ) ಪ್ರದೇಶದಲ್ಲಿ ಸಿಮೆಂಟ್ ಗೋಡೆ ಹಾಕಲಾಗಿದೆ. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ\’ ಎಂದು ಆರೋಪಿಸಿದರು.
`ಅತಿಕ್ರಮಣ ತೆರವಿಗೆ ಪಟ್ಟಣ ಪಂಚಾಯತ ಆದೇಶಿಸಿದೆ. ಆದರೆ, ಅತಿಕ್ರಮಣ ತೆರವು ಮಾಡದ ಬಗ್ಗೆ ಮೌನವಹಿಸಿದೆ. ಪಟ್ಟಣ ಪಂಚಾಯತ ಸದಸ್ಯರಿಂದ ಅಧಿಕಾರ ದುರುಪಯೋಗವಾಗುತ್ತಿದ್ದು, ಕೆಲಸ ನಡೆಯುವುದನ್ನು ಒಮ್ಮೆ ಪೊಲೀಸರು ಸಹ ತಡೆದಿದ್ದರು. ಆದರೆ, ಅದಾದ ನಂತರ ಮತ್ತೆ ರಸ್ತೆ ಅತಿಕ್ರಮಣ ಸ್ಥಳದಲ್ಲಿ ಕೆಲಸ ಮುಂದುವರೆದಿದೆ\’ ಎಂದು ದೂರಿದರು.
`ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಶುರು ಮಾಡಿದಾಗ ನನಗೆ ಜೀವ ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸ್ ದೂರು ನೀಡಿದ್ದು, ನ್ಯಾಯಾಲಯಕ್ಕೆ ತೆರಳಿ ಪೊಲೀಸ್ ದೂರು ದಾಖಲಿಸಲಾಗಿದೆ. ತಮಗೆ ಜೀವಭಯವಿದ್ದು, ರಕ್ಷಣೆ ಅಗತ್ಯ\’ ಎಂದು ಹೇಳಿದರು. `ಸರ್ಕಾರಿ ಭೂಮಿ ಹೋರಾಟಗಾರರ ವೇದಿಕೆಯಿಂದ ಅನ್ಯಾಯಕ್ಕೆ ಒಳಗಾದವರಿಗೆ ಬೆಂಬಲ ನೀಡಲಾಗುತ್ತದೆ\’ ಎಂದು ವೇದಿಕೆಯ ದೀರಜ್ ತಿನ್ನೆಕರ್ ಹೇಳಿದರು.