ದೋಷಪೂರಿತ ವಾಹನ ಸಂಖ್ಯೆ ಹೊಂದಿದವರ ಮೇಲೆ ಶಿರಸಿ ಪೊಲೀಸರು ( Police ) ನಿಗಾ ಇರಿಸಿದ್ದು, ವಿಶೇಷ ಕಾರ್ಯಾಚರಣೆ ನಡೆಸಿ ಸಾವಿರಾರು ರೂ ದಂಡ ವಸೂಲಿ ಮಾಡಿದ್ದಾರೆ.
ದೋಷಗಳಿಂದ ಕೂಡಿದ ವಾಹನ ಸವಾರರಿಂದ ಅಪರಾಧ ನಡೆದರೂ ಅವರನ್ನು ಕಂಡುಹಿಡಿಯುವುದು ಕಷ್ಟವಾದ ಹಿನ್ನಲೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಪೊಲೀಸರು ( Police ) ಈ ಕಾರ್ಯಾಚರಣೆ ನಡೆಸಿದರು. ಈ ವೇಳೆ ಸಂಚಾರ ನಿಯಮ ಉಲ್ಲಂಘಿಸಿದವರನ್ನು ಹಿಡಿದು ಬಿಸಿ ಮುಟ್ಟಿಸಿದರು.
ವಾಹನ ಓಡಿಸುವಾಗ ಮೊಬೈಲ್ ಬಳಸುತ್ತಿದ್ದವರು, ದ್ವಿಚಕ್ರ ವಾಹನದಲ್ಲಿ ಮೂವರು ಹೋಗುತ್ತಿದ್ದವರು ಸಹ ಈ ವೇಳೆ ಸಿಕ್ಕಿಬಿದ್ದರು. ಒಟ್ಟು 29 ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ದೋಷಪೂರಿತ ವಾಹನ ಓಡಿಸುವವರಿಂದ 15 ಸಾವಿರ ಹಾಗೂ ಇನ್ನಿತರ ಅಪರಾಧ ನಡೆಸಿದವರಿಂದ 20,500ರೂ ವಸೂಲಿ ಮಾಡಿದರು.