ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯಲ್ಲಾಪುರದ ಅಡಿಕೆ ವರ್ತಕರು ಗುರುವಾರ ವ್ಯಾಪಾರ-ವಹಿವಾಟು ನಡೆಸದೇ ಮುಷ್ಕರ ನಡೆಸಿದ್ದು, ಎಪಿಎಂಸಿ ಅಧಿಕಾರಿಗಳು ಹಾಗೂ ದಲ್ಲಾಳರ ಸಾಕ್ಷಿಯಾಗಿ ನಡೆದ ಸಭೆ ಯಶಸ್ವಿಯಾಗಿದೆ. ಈ ಹಿನ್ನಲೆ ಶುಕ್ರವಾರದಿಂದ ಮತ್ತೆ ಅಡಿಕೆ ( Areca ) ವಹಿವಾಟು ನಡೆಯಲಿದೆ. S News ಡಿಜಿಟಲ್
ಅಡಿಕೆ ಟೆಂಡರ್ ಬರೆಯುವಾಗ ಕಣ್ತಪ್ಪಿನಿಂದ ಆದ ಪ್ರಮಾದಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂಬುದು ಅಡಿಕೆ ವರ್ತಕರ ಮುಖ್ಯ ಬೇಡಿಕೆಯಾಗಿತ್ತು. ಟಿಎಸ್ಎಸ್ ಅಂಗಳದಲ್ಲಿ ಈಚೆಗೆ ನಡೆದ ವಿದ್ಯಮಾನವೊಂದು ಅಡಿಕೆ ವರ್ತಕರ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಸಾಕಷ್ಟು ಚರ್ಚೆಯ ನಂತರ ಅಡಿಕೆ ( Areca ) ವ್ಯಾಪಾರ ಬಹಿಷ್ಕರಿಸುವ ಬಗ್ಗೆ ವರ್ತಕರು ಘೋಷಿಸಿದ್ದರು. ಅಡಿಕೆ ದರ ನಮೂದಿಸುವ ವಿಷಯದಲ್ಲಿ ತಿದ್ದುಪಡಿ ನಡೆದಿದೆ ಎಂದು ಕೆಲ ರೈತರು ಪೊಲೀಸ್ ದೂರು ದಾಖಲಿಸಿದ್ದು, ಇದರಲ್ಲಿ ತಪ್ಪು ಯಾರದ್ದು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಈ ನಡುವೆ ರೈತರು, ಅಡಿಕೆ ವರ್ತಕರು, ದಲ್ಲಾಳರ ನಡುವೆ ಎಪಿಎಂಸಿ ಅಧಿಕಾರಿಗಳು ಸಮನ್ವಯತೆ ಕಾಪಾಡಿಕೊಳ್ಳಬೇಕು ಎಂದು ಬಹುತೇಕರು ಒತ್ತಾಯಿಸಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಗೊಂದಲ, ದಲ್ಲಾಳಿ ಹಾಗೂ ಬೆಳೆಗಾರರ ನಡುವಿನ ಕೆಲ ಅಹಿತಕರ ಘಟನೆಗಳನ್ನು ಖಂಡಿಸಿ ಯಲ್ಲಾಪುರದ ಅಡಿಕೆ ವರ್ತಕರು ಒಟ್ಟಾಗಿ ಅನಿರ್ಧಿಷ್ಟಾವಧಿ ಅವಧಿಗೆ ಅಡಿಕೆ ವಹಿವಾಟು ನಡೆಸದಿರಲು ನಿರ್ಧರಿಸಿದ್ದು ಈ ಬಗ್ಗೆ ಎಪಿಎಂಸಿ ಅಧಿಕಾರಿಗಳ ಬಳಿ ಗುರುವಾರ ಚರ್ಚೆ ನಡೆಸಿದರು.
ಕಣ್ತಪ್ಪಿನಿಂದ ಆದ ದೋಷಗಳ ಬಗ್ಗೆ ರೈತರ ಸಮಕ್ಷೇಮದಲ್ಲಿ ಮನವರಿಕೆ ಮಾಡುವುದು ಹಾಗೂ ಅಡಿಕೆ ಟೆಂಡರ್ ನಡೆಯುವ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಟೆಂಡರ್ ಡಿಕ್ಲರ್ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಹಿನ್ನಲೆ ಅಡಿಕೆ ವರ್ತಕರು ತಮ್ಮ ಮುಷ್ಕರ ಹಿಂಪಡೆದರು. ಶಿರಸಿ ಹಾಗೂ ಸಿದ್ದಾಪುರ ಮಾದರಿಯಲ್ಲಿಯೇ ಇನ್ಮುಂದೆ ಯಲ್ಲಾಪುರದಲ್ಲಿ ಸಹ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
S News ಡಿಜಿಟಲ್