ಮಳೆಗಾಲ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗುಡ್ಡ ಕುಸಿತ (Landslide) ಪ್ರಕರಣಗಳು ಹೆಚ್ಚಾಗಿದ್ದು ಗುಡ್ಡ ಕುಸಿತ ಲಕ್ಷಣಗಳು ಕಾಣಿಸಿದರೆ ತಕ್ಷಣ ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ\’ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.
ಜಿಲ್ಲೆಯಲ್ಲಿ ಗುಡ್ಡ ಕುಸಿತದಿಂದಾಗುವ ( Landslide ) ಅನಾಹುತಗಳ ತಡೆ ಕುರಿತ ತರಬೇತಿಗೆ ನಿಯೋಜಿಸಿರುವ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಶಿರೂರುನಲ್ಲಿ ನಡೆದ ಗುಡ್ಡ ಕುಸಿತ ಸಂದರ್ಭದಲ್ಲಿ ಆದ ಅನಾಹುತವನ್ನು ಪ್ರತಿಯೊಬ್ಬರೂ ಗಮನಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇಂಥ ಅನಾಹುತಗಳು ಸಂಭವಿಸುವುದನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಕಾರ್ಯ ಅತ್ಯಂತ ಪ್ರಮುಖವಾಗಿದ್ದು, ಸೂಕ್ತ ಸಮಯದಲ್ಲಿ ಮುನ್ನೆಚ್ಚರಿಕೆಯ ಮಾಹಿತಿ ದೊರೆತಲ್ಲಿ ಮಾನವ ಜೀವ ಹಾನಿಯಾಗುವುದನ್ನು ತಪ್ಪಿಸಲು ಸಾಧ್ಯ\’ ಎಂದರು.
`ಭಾರೀ ಮಳೆ, ಪ್ರವಾಹ, ಸೈಕ್ಲೂನ್ ಮುಂತಾದ ವಿಕೋಪಗಳ ಮಾಹಿತಿಗಳು ಸಾಕಷ್ಟು ಮುಂಚಿತವಾಗಿ ದೊರೆಯುತ್ತಿರುವ ಕಾರಣ ಇವುಗಳಿಂದ ಸಂಭವಿಸುವ ಹಾನಿಯನ್ನು ತಪ್ಪಿಸಲು ಸಾಧ್ಯವಿದೆ. ಆದರೆ ಗುಡ್ಡ ಕುಸಿತಗಳು ನಿಧಾನಗತಿಯಲ್ಲಿ ಆರಂಭಗೊಳ್ಳುವುದರಿ0ದ ಇವುಗಳ ಬಗ್ಗೆ ನಿಖರ ಮಾಹಿತಿಯನ್ನು ಸಾಕಷ್ಟು ಮುಂಚಿತವಾಗಿ ಪಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯಿ0ದ ಗುರುತಿಸಲಾಗಿರುವ 439 ಗುಡ್ಡ ಕುಸಿತ ಪ್ರದೇಶದ ವ್ಯಾಪ್ತಿಯಲ್ಲಿ ಅರಣ್ಯ, ಕಂದಾಯ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಗುಡ್ಡ ಕುಸಿತ ಲಕ್ಷಣಗಳ ಬಗ್ಗೆ, ಭೂ ವಿಜ್ಞಾನಿಗಳ ಮೂಲಕ ತರಬೇತಿ ನೀಡಲಾಗುತ್ತಿದೆ\’ ಎಂದರು.
ಜಿ.ಎಸ್.ಐ\’ನ ಡೆಪ್ಯುಟಿ ಡೃರೆಕ್ಟರ್ ಜನರಲ್ ಮತ್ತು ಪ್ರಾದೇಶಿಕ ಮಿಷನ್ ಮುಖ್ಯಸ್ಥ ಕೆ.ವಿ. ಮಾರುತಿ ಮಾತನಾಡಿ `ಭೂ ಕುಸಿತ ಸ್ಥಳಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಮುನ್ನೆಚ್ಚರಿಕೆ ನೀಡುವ ಕಾರ್ಯವನ್ನು ನೋಡಲ್ ಏಜೆನ್ಸಿಯಾಗಿ ಜಿ.ಐ.ಎಸ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ದೇಶದಾದ್ಯಂತ ಭೂ ಕುಸಿತ ಪ್ರದೇಶಗಳನ್ನು ವೀಕ್ಷಿಸಿ ಅವುಗಳನ್ನು ತೀವ್ರ, ಮಧ್ಯಮ ಮತ್ತು ಸಾಮಾನ್ಯ ಭೂ ಕುಸಿತ ಪ್ರದೇಶಗಳ ಎಂಬ ಬಗ್ಗೆ ಸಂಬ0ಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಮತ್ತು ನಕ್ಷೆಯನ್ನು ನೀಡಲಾಗಿದೆ\’ ಎಂದರು.
`ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ವೈಜ್ಞಾನಿಕ ರೀತಿಯಲ್ಲಿ ಯೋಜನೆ ರೂಪಿಸಬೇಕು. ಅಭಿವೃದ್ಧಿ ಯೋಜನೆಗಳಿಗಾಗಿ ಗುಡ್ಡಗಳನ್ನು ಕಡಿಯುವುದು, ಸಾಂಪ್ರದಾಯಿಕ ನೀರಿನ ಹರಿವಿಗೆ ತಡೆ ಒಡ್ಡಿ ಕಟ್ಟಡಗಳ ನಿರ್ಮಾಣ, ಮರಗಳ ನಾಶ ಮುಂತಾದ ಕಾರಣಗಳಿಂದ ಭೂ ಕುಸಿತ ಸಂಭವಿಸಲಿದೆ. ಭೂ ಕುಸಿತಗಳು ತಕ್ಷಣದಲ್ಲಿ ಸಂಭವಿಸುವುದಿಲ್ಲ, ಕುಸಿತ ಸಂಭವಿಸುವ ಪೂರ್ವದಲ್ಲಿ ಆ ಭಾಗದಲ್ಲಿ ವಿವಿಧ ಬದಲಾವಣೆಗಳು ನಡೆಯುತ್ತವೆ. ಈ ಬದಲಾವಣೆಗಳನ್ನು ಗಮನಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರಿಂದ ಅನಾಹುತಗಳಾಗುವುದನ್ನು ತಪ್ಪಿಸಬಹುದು\’ ಎಂದರು.