2015ರ ನಂತರದ ಅರಣ್ಯ ಅತಿಕ್ರಮಣ ಖುಲ್ಲಾ ಪಡಿಸಲು ಆದೇಶ ಹೊರಡಿಸಿದ್ದರಿಂದ ಆತಂಕಕ್ಕೆ ಒಳಗಾದ ಅರಣ್ಯವಾಸಿಗಳಾದ ಕುಣುಬಿ ಸಮುದಾಯದವರು ಈ ಆದೇಶಕ್ಕೆ ತಡೆ ಹಿಡಿಯಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಜೊಯಿಡಾ ತಾಲೂಕಾ ಆಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಅವರು ಮನವಿ ಮಾಡಿದ್ದಾರೆ.
`ಪಶ್ಚಿಮ ಘಟ್ಟ ವ್ಯಾಪ್ತಿಯ 2015 ನಂತರ ಅರಣ್ಯ ಅತಿಕ್ರಮಣವೆಂದು ಪರಿಗಣಿಸಿ ಖುಲ್ಲಾ ಪಡಿಸಲು ಆದೇಶ ಮಾಡಿದ್ದು ಸರಿಯಲ್ಲ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಜನರು ಕಾಡಿನ ಕಿರು ಉತ್ಪನ್ನ, ಜಮೀನಿನ ಸುತ್ತಲೂ ಗೇರು, ಅಡಿಕೆ, ಬಾಳೆ, ಸೊಪ್ಪು ಬೆಳೆದಿದ್ದು, ಉತ್ಪನ್ನ ಸಂಗ್ರಹ ಮಾಡುತ್ತಿದ್ದಾರೆ. ಸರ್ಕಾರದ ಆದೇಶದಿಂದ ಈ ಮೂಲನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ\’ ಎಂದವರು ವಿವರಿಸಿದರು. `ಅದಾಗಿಯೂ ಅತಿಕ್ರಮಣ ತೆರವಿಗೆ ಮುಂದಾದರೆ ಹೋರಾಟ ಅನಿವಾರ್ಯ\’ ಎಂದು ಎಚ್ಚರಿಸಿದರು.
ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾವಡಾ, ತಾಲೂಕಾ ಅಧ್ಯಕ್ಷ ಪ್ರೇಮಾನಂದ ವೇಳಿಪ, ಉಪಾಧ್ಯಕ್ಷ ಕೃಷ್ಣಾ ಮಿರಾಶಿ, ಕಾರ್ಯದರ್ಶಿ ದಯಾನಂದ ಕುಮಗಾಳಕರ, ರಾಜೇಶ್ ಗಾವಡಾ, ಖಜಾಂಚಿ ದಿವಾಕರ ಕುಂಡಲಕರ, ಪ್ರಮುಖರಾದ ದತ್ತಾ ಗಾವಡಾ, ಸುಭಾಷ್ ವೇಳಿಪ, ಸುರೇಶ ಗಾವಡಾ, ಪಾಂಡುರAಗ ಗಾವಡಾ, ನಾಮದೇವ ಗಾವಡಾ ಮನವಿ ಸಲ್ಲಿಸಿದವರು.