ದಾಂಡೇಲಿ ನಗರದ ಟೌನ್ಶಿಪ್ನಲ್ಲಿರುವ ರಾಘವೇಂದ್ರ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಸಡಗರದಿಂದ ನಡೆಯಿತು.
ಗುರುವಾರ ಬೆಳಗ್ಗೆ ವಿವಿಧ ಕಾರ್ಯಕ್ರಮ ಶುರುವಾಗಿದ್ದು, ಅನೇಕ ಭಕ್ತರು ಆಗಮಿಸಿ ಶ್ರದ್ಧಾ ಭಕ್ತಿಯಿಂದ ದೇವರ ಆರಾಧನೆ ನಡೆಸಿದರು. ರಾಘವೇಂದ್ರ ಮಠದಿಂದ ಆರಂಭಗೊ0ಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಕೊನೆಯಲ್ಲಿ ಶ್ರೀ ರಾಘವೇಂದ್ರ ಮಠದಲ್ಲಿ ಗುರುವಾರ ಸಂಪನ್ನಗೊ0ಡಿತು.
ಮಠದ ಪ್ರಧಾನ ಅರ್ಚಕರಾದ ವಾದಿರಾಜ್ ಆಲೂರು ಅವರ ಪೌರೋಹಿತ್ಯದಲ್ಲಿ ನಡೆದ ಪೂಜಾ ಕಾರ್ಯಕ್ರಮ ಹಾಗೂ ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಾಣೇಶ್ ಮುಗಳಿಹಾಳ, ಉಪಾಧ್ಯಕ್ಷರಾದ ರಾಘು ಜೋಶಿ ಇತರರು ಭಾಗವಹಿಸಿದ್ದರು.