ಕರಾವಳಿ ಭಾಗದಲ್ಲಿ ಸಮುದ್ರ ಕೊರೆತ ಮುಂದುವರೆದಿದ್ದು, ಅಲೆಗಳ ಅಬ್ಬರಕ್ಕೆ ಅಂಕೋಲಾದ ಬಡ ಕುಟುಂಬದ ಬದುಕು ನರಕವಾಗಿದೆ.
ಬೇಲೇಕೆರಿ ಹೋಬಳಿಯ ಹಾರವಾಡದ ತರಂಗಮೆಟ್\’ದಲ್ಲಿ ನಡೆದ ಸಮುದ್ರ ಕೊರೆತದಿಂದ ಅಶೋಕ ಜಾನು ಹರಿಕಂತ್ರ ಅವರ ಮನೆ ನೆಲಸಮವಾಗಿದೆ. ಇದೀಗ ಅಲ್ಲಿ ಮನೆಯ ಅವಶೇಷಗಳು ಮಾತ್ರ ಉಳಿದಿದ್ದು, ಬದುಕು ನಡೆಸಲು ಮುಂದೇನು? ಎಂಬ ಆತಂಕದಲ್ಲಿ ಅಲ್ಲಿನವರಿದ್ದಾರೆ.
ಸಮುದ್ರದಲ್ಲಿ ಅಲೆಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಸಮುದ್ರದ ಅಂಚಿನಲ್ಲಿ ಬಿಡಾರ ಕಟ್ಟಿ ಬದುಕುತ್ತಿದ್ದ ಬಡವರಿಗೆ ನಡುಕ ಶುರವಾಗಿದೆ. ಬಡತನ, ಉದ್ಯೋಗ ಇಲ್ಲದಿರುವಿಕೆ, ಮೀನುಗಾರಿಕೆಯಲ್ಲಿನ ನಷ್ಟದ ನಡುವೆ ಇದೀಗ ಇದ್ದ ಮನೆಯನ್ನು ಕಳೆದುಕೊಂಡ ಮೀನುಗಾರನಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ.