ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಜನ ಕೃಷಿ, ಸೊಪ್ಪಿನಬೆಟ್ಟ ಹಾಗೂ ಅತಿಕ್ರಮಣ ಪ್ರದೇಶದಲ್ಲಿ ಮನೆ ( House ) ನಿರ್ಮಿಸಿಕೊಂಡಿದ್ದು ಸರ್ಕಾರದ ಪ್ರಕಾರ ಇದೆಲ್ಲವೂ ಅನಧಿಕೃತ. ಈ ಮನೆಗಳಿಗೆ ಗ್ರಾ ಪಂ ತೆರಿಗೆ ವಿಧಿಸುತ್ತಿದ್ದರೂ `ಈ ತೆರಿಗೆ ಪಾವತಿಯೂ ಮಾಲಿಕತ್ವದ ಹಕ್ಕನ್ನು ದೃಢೀಕರಿಸುವುದಿಲ್ಲ\’ ಎಂಬ ಮೊಹರು ಹೊಂದಿರುವುದು ಸಾಮಾನ್ಯ. ಪ್ರಸ್ತುತ ಗುಡ್ಡಗಾಡು ಪ್ರದೇಶದಲ್ಲಿನ ಎಲ್ಲಾ ಮನೆ ಹಾಗೂ ಅಂಗಡಿಗಳನ್ನು ತೆರವು ಮಾಡುವಂತೆ ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದು, ಇದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಶಿರೂರು ಗುಡ್ಡ ಕುಸಿತ ಆತಂಕದಲ್ಲಿರುವ ಅಂಕೋಲಾ ತಾಲೂಕು ಆಡಳಿತ ಗುಡ್ಡಗಾಡು ಪ್ರದೇಶದ ಹಾಗೂ ರಾಷ್ಟ್ರೀಯ ಹೆದ್ದಾರಿ ಅಂಚಿನ ಗುಡ್ಡದ ತಪ್ಪಲಿನಲ್ಲಿರುವ ಎಲ್ಲಾ ಅನಧಿಕೃತ ಮನೆ ( House ) ಹಾಗೂ ಅಂಗಡಿಗಳನ್ನು ತೆರವು ಮಾಡುವಂತೆ ಸೂಚಿಸಿ ಆದೇಶ ಹೊರಡಿಸಿದೆ. ಈ ಆದೇಶ ಭವಿಷ್ಯದಲ್ಲಿ ಇತರೆ ತಾಲೂಕುಗಳಿಗೂ ವಿಸ್ತರಣೆ ಆದರೆ ಅಚ್ಚರಿಯಿಲ್ಲ!
S News ಡಿಜಿಟಲ್
ಪ್ರಸ್ತುತ ಅಂಕೋಲಾ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ತಹಶೀಲ್ದಾರ್ ಈ ಸೂಚನೆ ನೀಡಿದ್ದು, ತಾಲೂಕು ಪಂಚಾಯತದಿ0ದ ಈ ಆದೇಶ ಗ್ರಾಮ ಪಂಚಾಯತಗಳಿಗೆ ರವಾನೆಯಾಗಿದೆ. ಕುಮಟಾ ಸಹಾಯಕ ಆಯುಕ್ತರ ಸೂಚನೆ ಮೇರೆಗೆ ಈ ಆದೇಶ ಹೊರಡಿಸಿರುವುದಾಗಿ ತಹಶೀಲ್ದಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಂಕೋಲಾ ತಾಲೂಕಿನ ಬಹುಪಾಲು ಪ್ರದೇಶ ಗುಡ್ಡಗಾಡಿನಿಂದ ಕೂಡಿದ್ದು, ಈ ಆದೇಶ ಪಾಲನೆ ಮಾಡಿದರೆ ಬಹುತೇಕ ಯಾರ ಮನೆ ಸಹ ಇರುವುದಿಲ್ಲ. ಅಂಕೋಲಾ ಮಾತ್ರವಲ್ಲ ಈ ಆದೇಶ ಇಡೀ ಜಿಲ್ಲೆಗೆ ವಿಸ್ತರಣೆ ಆದರೆ ಬಹುಪಾಲು ಜನ ನಿರ್ಗತಿಕರಾಗುವುದು ಖಚಿತ! S News ಡಿಜಿಟಲ್

ಗುಡ್ಡಗಾಡು ಪ್ರದೇಶದಲ್ಲಿನ ಅನಧಿಕೃತ ಮನೆ ತೆರವು ಮಾಡುವಂತೆ ಪತ್ರದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದ್ದು, ಸರ್ಕಾರದ ಪ್ರಕಾರ ಭೂ ಪರಿವರ್ತನೆ ಆಗದೇ ನಿರ್ಮಿಸಿಕೊಂಡ ಎಲ್ಲಾ ಮನೆಗಳು ಅನಧಿಕೃತ. ಪ್ರಸ್ತುತ ಲೆಕ್ಕಾಚಾರದಲ್ಲಿ ಇಡೀ ತಾಲೂಕಿನಲ್ಲಿ ಶೇ 10ರಷ್ಟು ಮನೆಗಳು ಸಹ ಭೂ ಪರಿವರ್ತನೆಗೆ ಒಳಪಟ್ಟಿಲ್ಲ. ಜಿಲ್ಲೆಯಲ್ಲಿ ಸಹ ಅಧಿಕೃತ ಮನೆಗಳನ್ನು ಹೊಂದಿರುವವರ ಸಾಧ್ಯತೆ ತೀರಾ ಕಡಿಮೆ. ಬಹುತೇಕರು ಕೃಷಿ ಅಥವಾ ಅತಿಕ್ರಮಣ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.
ಗ್ರಾ ಪಂ ಕಚೇರಿಗೆ ಪಾವತಿಸುವ ತೆರಿಗೆ ಹೊರತುಪಡಿಸಿ ಉಳಿದ ಯಾವ ದಾಖಲೆಗಳು ಆ ಮನೆಗಳಿಗಿಲ್ಲ. ಆ ತೆರಿಗೆ ಮೇಲೆ ಸಹ `ಈ ತೆರಿಗೆ ಪಾವತಿಯೂ ಮಾಲಿಕತ್ವದ ಹಕ್ಕನ್ನು ದೃಢೀಕರಿಸುವುದಿಲ್ಲ\’ ಎಂದು ಬರೆಯಲಾಗುತ್ತದೆ. ಶಿರೂರು ಗುಡ್ಡ ಕುಸಿತದ ಹಿನ್ನಲೆ ಈ ಆದೇಶ ಇಡೀ ಜಿಲ್ಲೆಗೆ ವಿಸ್ತರಣೆಯಾಗಿ ಕಟ್ಟು ನಿಟ್ಟಾಗಿ ಜಾರಿಯಾದರೆ ಎಲ್ಲರ ಬದುಕು ನರಕ. ಹೀಗಾಗಿ ಹೆದ್ದಾರಿ ಅಂಚು ಹಾಗೂ ಗುಡ್ಡಗಾಡಿನ ನಿವಾಸಿಗಳ ಎದೆಯಲ್ಲಿ ಡವಡವ ಶುರುವಾಗಿದೆ. S News ಡಿಜಿಟಲ್
ಇನ್ನೂ ಅನೇಕ ಕಡೆ ಸರ್ಕಾರಿ ಯೋಜನೆಗಳಿಂದ ಮನೆ ನಿರ್ಮಿಸಿಕೊಂಡವರಿದ್ದಾರೆ. ಆದರೆ, ಅವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಗುಡ್ಡಗಾಡಿನ ಜನ ಅರಣ್ಯ ಅತಿಕ್ರಮಣದಲ್ಲಿ ಬದುಕು ಕಟ್ಟಿಕೊಂಡಿದ್ದು, ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇನ್ನೂ ಹೆದ್ದಾರಿ ಪಕ್ಕದಲ್ಲಿ ಸಹ ಸಾಕಷ್ಟು ಪ್ರಮಾಣದಲ್ಲಿ ಮನೆ-ಗೂಡಂಗಡಿಗಳಿವೆ. ಅಲ್ಲಿನ ಜನರ ಬದುಕಿಗೆ ಅವು ಆಧಾರವಾಗಿದೆ. ಪ್ರಸ್ತುತ ಈ ಬಗೆಯ ಆದೇಶ ಹೊರಡಿಸಿರುವುದರ ವಿರುದ್ಧವೂ ಹೋರಾಟ ನಡೆಯುವ ಸಾಧ್ಯತೆಗಳು ಹೆಚ್ಚಿದೆ.
S News ಡಿಜಿಟಲ್