ತುರ್ತು ಸನ್ನಿವೇಶದಲ್ಲಿ 60 ಸಾವಿರ ರೂ ಕೈ ಸಾಲ ( Hand loan ) ಪಡೆದಿದ್ದ ಮುಂಡಗೋಡಿನ ಗಣೇಶ ಶಿರಾಲಿ ಅವರಿಗೆ ಸಾಲ ನೀಡಿದವರು 1.27 ಲಕ್ಷ ರೂ ಪಾವತಿಸುವಂತೆ ದುಂಬಾಲು ಬಿದ್ದಿದ್ದಾರೆ. ಈ ಹಣ ಪಾವತಿಸದ ಕಾರಣ ಗಣೇಶ ಶಿರಾಲಿ ಅವರ ಜೊತೆ ಅವರ ಅಣ್ಣ ನಾಗರಾಜ ಶಿರಾಲಿ ಅವರಿಗೂ ನಾಲ್ವರು ಜೀವ ಬೆದರಿಕೆ ಹಾಕಿದ್ದಾರೆ. S News ಡಿಜಿಟಲ್
ಮುಂಡಗೋಡು ಇಂದಿರಾನಗರದ ಗಣೇಶ ಶಿರಾಲಿ ಮುಂಡಗೋಡದ ಹುಬ್ಬಳ್ಳಿ ರಸ್ತೆಗೆ ಹೊಂದಿಕೊ0ಡು ಕಂಪ್ಯುಟರ್ ಸೆಂಟರ್ ನಡೆಸುತ್ತಾರೆ. ಅಗಸ್ಟ 22ರಂದು ಕಂಪ್ಯುಟರ್ ಸೆಂಟರಿನಲ್ಲಿ ಅಣ್ಣ ನಾಗರಾಜ ಶಿರಾಲಿ ಜೊತೆ ಗಣೇಶ್ ಶಿರಾಲಿ ಕೆಲಸ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ದೇಶಪಾಂಡೆ ನಗರದ ನಾಗರಾಜ ಚೌಹಾಣ, ಹುಬ್ಬಳ್ಳಿ ರಸ್ತೆಯ ಪ್ರಸನ್ನ ಗೌಳಿ, ವಿಶಾಲ ಶೇಟ್ ಹಾಗೂ ನಂದಿಶ್ವರ ನಗರದ ವೀರೇಶ ಹಲಗೂರು ಹಣಕ್ಕಾಗಿ ( Hand loan ) ಪೀಡಿಸಿದ್ದಾರೆ. `1.27 ಲಕ್ಷ ರೂ ಕೊಡುವಂತೆ ಎಷ್ಟು ಸಲ ಹೇಳಬೇಕು?\’ ಎಂದು ದಬಾಯಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ನಾಲ್ವರು ಸೇರಿ ಅಂಗಡಿಯಲ್ಲಿದ್ದ ಇಬ್ಬರಿಗೆ ಕೆಟ್ಟದಾಗಿ ಬೈದಿದ್ದಾರೆ. ನಂತರ `ಹಣ ಪಾವತಿಸದೇ ಇದ್ದರೆ ಜೀವಸಹಿತ ಬಿಡುವುದಿಲ್ಲ\’ ಎಂದು ಹೆದರಿಸಿದ್ದಾರೆ.
ತುರ್ತು ಪರಿಸ್ಥಿತಿಯ ವೇಳೆ 60 ಸಾವಿರ ರೂ ಕೈ ಸಾಲ ಪಡೆದ ಕಾರಣ ಸಹೋದರರು ಇದೀಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಗಣೇಶ ಶಿರಾಲಿ ಪೊಲೀಸರ ಮೊರೆ ಹೋಗಿದ್ದಾರೆ.
S News ಡಿಜಿಟಲ್