ಕಾರವಾರದ ಶಿರವಾಡ ಬಂಗಾರಪ್ಪನಗರದಲ್ಲಿರುವ ಶ್ರೀ ಸಿದ್ದ ಬಸವೇಶ್ವರ ದೇವಸ್ಥಾನದಲ್ಲಿ ( God ) ಅಗಸ್ಟ 26ರಂದು ಶ್ರಾವಣ ಸೋಮವಾರದ ವಿಶೇಷ ಪೂಜೆ ನಡೆಯಲಿದೆ.
ಕಳೆದ 9 ವರ್ಷಗಳಿಂದ ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಪ್ರಸ್ತುತ 10ನೇ ವರ್ಷದ ಶ್ರಾವಣ ಸೋಮವಾರದ ಅಂಗವಾಗಿ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ ( God )ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಹಿಂದೂ ಜನಜಾಗೃತಿ ವೇದಿಕೆಯ ಬಿ ಎನ್ ಸಂತೋಷ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರ ಜೊತೆ ಶಿರಸಿಯ ಚಂದ್ರಶೇಖರ್ ಹಿರೇಮಠ್, ಕೈಗಾ ಬಸವ ಬಳಗದ ಸದಸ್ಯರು ಹಾಜರಿರಲಿದ್ದಾರೆ.
ಭಕ್ತರು ಧಾರ್ಮಿಕ ಹಾಗೂ ಅನ್ನ ಸಂತರ್ಪಣೆ ಕಾರ್ಯದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಬೇಕು ಎಂದು ವೀರಶೈವ ಸಂಸ್ಕೃತಿಕ ಸಂಘದವರು ತಿಳಿಸಿದ್ದಾರೆ.
S News ಡಿಜಿಟಲ್