ಸಿದ್ದಾಪುರದ ಶ್ರೀಮನ್ನೆಲೆಮಾವು ಮಠದ ಆವಾರದಲ್ಲಿ ಶ್ರೀಮಾಧವಾನಂದ ಭಾರತಿ ಸ್ವಾಮೀಜಿ ತಾಯಿ ಭಾರತಾಂಬೆಯ ಹೆಸರಿನಲ್ಲಿ ಗಿಡ ನೆಟ್ಟರು.
ತಾಯಿ ಹೆಸರಿನಲ್ಲಿ ಗಿಡ ನೆಡಲು ಪ್ರಧಾನಿ ಕರೆ ನೀಡಿದ್ದರಿಂದ ಪ್ರೇರಣೆಗೊಂಡ ಅವರು ಮಠದ ಪರಿಸರದಲ್ಲಿ ಮಾವಿನ ಗಿಡಗಳನ್ನು ನಾಟಿ ಮಾಡಿದರು. ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿ ಮಹಾಬಲೇಶ್ವರ ಬಿ.ಎಸ್, ತೋಟಗಾರಿಕಾ ಅಧಿಕಾರಿ ಕಾಶೀನಾಥ್ ಪಾಟೀಲ್, ಶ್ರೀಮಠದ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು ಈ ವೇಳೆ ಹಾಜರಿದ್ದರು.