ಯಲ್ಲಾಪುರ: `ವೃದ್ಧರು, ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಅವರಿಗೆ ವಿವಿಧ ಆಮೀಷ ಒಡ್ಡಿ ಬ್ಯಾಂಕ್ ಖಾತೆಯಲ್ಲಿನ ಹಣ ವಂಚಿಸುವವರ ಸಂಖ್ಯೆ ಹೆಚ್ಚಾಗಿದ್ದು ಜನ ಜಾಗೃತರಾಗಿರಬೇಕು\’ ( Cyber crime awareness ) ಎಂದು ಮಂಚಿಕೇರಿಯ ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀನಾಥ ಕೊತಳೆ ಅರಿವು ಮೂಡಿಸಿದರು.
ಕಂಪ್ಲಿ ಗ್ರಾ ಪಂ ಸಭಾಭವನದಲ್ಲಿ ನಡೆದ ಸಾಮಾಜಿಕ ಭದ್ರತಾ ಯೋಜನೆಗಳ ಸ್ಯಾಚುರೇಶನ್ ಅಭಿಯಾನದಲ್ಲಿ ಮಾತನಾಡಿದ ಅವರು `ಬ್ಯಾಂಕ್ ವ್ಯವಹಾರಗಳ ವಿಷಯದಲ್ಲಿ ಜನ ಕಾಳಜಿವಹಿಸಬೇಕು. ( Cyber crime awareness ) ಆನ್ಲೈನ್ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಳ್ಳಬಾರದು\’ ಎಂದು ಹೇಳಿದರು. `ಈಚೆಗೆ ಸಾಕಷ್ಟು ಜನ ವಂಚಕರ ಮಾತು ನಂಬಿ ಮೋಸ ಹೋಗಿದ್ದಾರೆ. ಯಾವುದೇ ಅನುಮಾನಗಳಿದ್ದರೂ ಬ್ಯಾಂಕಿಗೆ ಬಂದು ವಿಚಾರಿಸಿ\’ ಎಂದವರು ಕರೆ ನೀಡಿದರು. ಜನಧನ್, ಮುದ್ರಾ ಸೇರಿ ಇನ್ನಿತರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾ ಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್, ಪಶು ಇಲಾಖೆಯ ಡಾ ರಾಜೇಶ, ಸಂಜೀವಿನಿ ಒಕ್ಕೂಟದ ಶಾಲಿನಿ ಹೆಗಡೆ, ಧಾನ್ ಪೌಂಡೇಶನ್\’ನ ಮುಕುಂದ ಮರಾಠಿ, ಶೃತಿ ನೆಲವಾಡಿ ಇತರರು ಇದ್ದರು.