ಮುಂಡಗೋಡ ತಾಲೂಕಿನ 51 ಅಂಗನವಾಡಿಗಳಲ್ಲಿ ( Education ) ಮೂಲ ಸೌಕರ್ಯಗಳಿಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲ. ಶೌಚಾಲಯವಿದ್ದರೂ ಕೆಲವಡೆ ನೀರಿನ ಸಂಪರ್ಕ ಇಲ್ಲ. ಕೆಲವೆಡೆ ತೂಕದ ಯಂತ್ರ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ ಇದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ.
ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಜನಪರ ಸಂಘಟನೆಗಳ ವೇದಿಕೆ ಮುಖಂಡ ಬೀರು ಕಾತ್ರೋಡ `ಈ ಎಲ್ಲಾ ಅಂಗನವಾಡಿಗಳಿಗೆ ( Education ) ಸೌಕರ್ಯ ಒದಗಿಸಬೇಕು\’ ಎಂದು ಆಗ್ರಹಿಸಿದರು. `ಕಳೆದ 2023ರ ಏಪ್ರಿಲ್ ತಿಂಗಳಿನಿAದ ನಾಲ್ಕು ಜಿಲ್ಲೆಗಳಲ್ಲಿ ಅಂಗನವಾಡಿಗಳ ಸ್ಥತಿಗತಿಗಳ ಬಗ್ಗೆ ವರದಿ ಮಾಡಲಾಗಿದೆ. ಅದರ ಪ್ರಕಾರ ಮುಂಡಗೋಡಿನ 51 ಅಂಗನವಾಡಿಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ\’ ಎಂದರು.
`ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದು, ಸೌಕರ್ಯ ಒದಗಿಸದೇ ಇದ್ದಲ್ಲಿ ಮುಂದಿನ ಹೋರಾಟ ನಡೆಸುವುದು ಅನಿವಾರ್ಯ\’ ಎಂದು ಎಚ್ಚರಿಸಿದರು. ವೇದಿಕೆಯ ರವಿ ಲಮಾಣಿ, ಸಿದ್ದಪ್ಪ ಕ್ಯಾಲಕಟ್ಟಿ, ಶ್ರೀನಿವಾಸ ಪಾಟೀಲ, ಭರಮಣ್ಣ, ಲಾರೆನ್ಸ್, ಅನಿತಾ ಶೇಟ್, ಫಾತಿಮಾ ಸುಲೇಮಾನ ಇದ್ದರು.