ಚಲಿಸುತ್ತಿದ್ದ ರೈಲಿಗೆ ಜಿಗಿದ ಪರಿಣಾಮ ಕುಮಟಾದ ಗೌರೀಶ ಮಾದೇವ ಗೌಡ (35) ಎಂಬಾತ ತನ್ನ ಪ್ರಾಣ ( Suicide ) ಕಳೆದುಕೊಂಡಿದ್ದಾನೆ.
ಹೆರವಟ್ಟಾದ ಸಾಣಿಯಮ್ಮ ದೇವಸ್ಥಾನ ಬಳಿ ವಾಸವಾಗಿದ್ದ ಗೌರೀಶ ಗೌಡ ಕಟ್ಟಡಗಳಿಗೆ ಬಣ್ಣ ಬಡಿಯುವ ಕಾರ್ಮಿಕನಾಗಿದ್ದ. ಇದರಿಂದ ದೊರೆತ ಬಹುಪಾಲು ಹಣವನ್ನು ಮದ್ಯ ವ್ಯಸನಕ್ಕಾಗಿ ವ್ಯಯಿಸುತ್ತಿದ್ದ. ಮನೆಯಲ್ಲಿ ಎಷ್ಟು ಹೇಳಿದರೂ ಆತ ಕುಡಿತದಿಂದ ಹೊರ ಬಂದಿರಲಿಲ್ಲ. ಈಚೆಗೆ ಮಾನಸಿಕವಾಗಿ ಸಹ ಕುಗ್ಗಿದ್ದ ಆತ ಅಗಸ್ಟ 23ರ ರಾತ್ರಿ 8.17ಕ್ಕೆ ಮಣಕಿ ಮೈದಾನದ ಪಕ್ಕದಲ್ಲಿರುವ ಬೆಣ್ಣೆ ಕಾಲೇಜಿನ ಬಳಿ ಹೋಗಿದ್ದು, ಅಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಹಾರಿದ್ದಾನೆ. ಜೊತೆಗೆ ಅಲ್ಲಿಯೇ ಆತ ಕೊನೆ ( Suicide ) ಉಸಿರೆಳೆದಿದ್ದಾನೆ.
ಈ ವಿಷಯ ಅರಿತ ಆತನ ತಮ್ಮ ಆಟೋ ಚಾಲಕ ಲೋಕೇಶ ಮಾದೇವ ಗೌಡ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. `ಜೀವನದಲ್ಲಿನ ಜಿಗುಪ್ಸೆಯಿಂದ ಆತ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯಿದೆ\’ ಎಂದು ಲೋಕೇಶ್ ಗೌಡ ಪೊಲೀಸರಿಗೆ ತಿಳಿಸಿದ್ದು, ತನಿಖೆ ಮುಂದುವರೆದಿದೆ.