ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರಿಕರಿಸಿ ವಾಟ್ಸಪ್ ( Whatsapp ) ಮೂಲಕ ಹರಿಬಿಟ್ಟ ಹೊನ್ನಾವರದ ವಿಶ್ವನಾಥ ಗಣೇಶ ನಾಯ್ಕ (36) ಎಂಬಾತನ ವಿರುದ್ಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಹೊದಿಗೆ ಜಡ್ಡಿಗದ್ದೆಯ ವ್ಯಾಪಾರಿ ವಿಶ್ವನಾಥ ನಾಯ್ಕ ಅದೇ ಊರಿನ ಮಹಿಳೆಯೊಬ್ಬರ ಅಶ್ಲೀಲ ವಿಡಿಯೋವನ್ನು ತನ್ನ ಮೊಬೈಲಿನಲ್ಲಿ ಚಿತ್ರಿಕರಿಸಿದ್ದ. ಸಂತ್ರಸ್ತ ಮಹಿಳೆ ಮಾನಸಿಕವಾಗಿ ಕುಗ್ಗಿದ್ದು, ಮನೆಯೊಳಗೆ ಬಟ್ಟೆ ಧರಿಸಿದೇ ಓಡಾಡಿದ್ದ ವಿಡಿಯೋವನ್ನು ಆರೋಪಿ ಸಂಗ್ರಹಿಸಿದ್ದ. ಇದೇ ವಿಡಿಯೋವನ್ನು ತಿಮ್ಮಣ್ಣ ಗಣಪತಿ ಭಂಡಾರಿ ಎಂಬಾತರ ಮೊಬೈಲಿಗೆ ವಾಟ್ಸಪ್ ( Whatsapp ) ಮೂಲಕ ಹರಿಬಿಟ್ಟಿದ್ದ. ಈ ವಿಷಯ ಅರಿತ ಮಹಿಳೆ ವಿಶ್ವನಾಥನನ್ನು ವಿಚಾರಿಸಿದ್ದು, ಆ ವೇಳೆ ಆತ ಮಹಿಳೆಗೆ ಜೀವ ಬೆದರಿಕೆ ಒಡ್ಡಿದ್ದಾನೆ.
ಅಶ್ಲೀಲ ವಿಡಿಯೋ ಚಿತ್ರಿಕರಿಸಿ ಹರಿಬಿಟ್ಟಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ವಿಶ್ವನಾಥನ ವಿರುದ್ಧ ಸಂತ್ರಸ್ತ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ.