ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುವ ಸವಾರರಿಂದ ಭಟ್ಕಳ PSI ಯಲ್ಲಪ್ಪ ಅವರು ಸಂಗ್ರಹಿಸುವ ಹಣ ಚಿನ್ನದ ವ್ಯಾಪಾರಿಯೊಬ್ಬರ ಖಾತೆಗೆ ವರ್ಗವಾಗುತ್ತಿದೆ. ಚಿನ್ನದ ವ್ಯಾಪಾರಿ ಖಾತೆಗೆ ಹಣ ಹಾಕಿದರೂ ಯಲ್ಲಪ್ಪ ( Police ) ಅವರು ಸರ್ಕಾರಿ ಖಜಾನೆಗೆ ಹಣ ಪಾವತಿಸಿದ ರಸೀದಿ ನೀಡುತ್ತಿದ್ದಾರೆ!
ಈ ಬಗ್ಗೆ ಸಾಕಷ್ಟು ಸಾರ್ವಜನಿಕರು ದೂರಿದ ನಂತರ `ಭಟ್ಕಳ ಡೈರಿ\’ ಎಂಬ ಮಾಧ್ಯಮ ರಿಯಾಲಿಟಿ ಚಕ್ ನಡೆಸಿದ್ದು, ಆಗ ಸಹ ಇದೇ ಪುನರಾವರ್ತನೆಯಾಗಿದೆ. ಕಳೆದ ಒಂದು ತಿಂಗಳಿನಿ0ದ ಭಟ್ಕಳದಲ್ಲಿ ನಿರಂತರವಾಗಿ ವಾಹನ ತಪಾಸಣೆ ನಡೆಯುತ್ತಿದೆ. ಅನೇಕ ದ್ವಿಚಕ್ರ ವಾಹನ ಸವಾರರು ಪೊಲೀಸರ ( Police ) ಬಳಿ ಸಿಕ್ಕಿಬಿದ್ದಿದ್ದಾರೆ. ಹೀಗೆ ಸಿಕ್ಕಿಬಿದ್ದವರು ನಗದು ರೂಪದಲ್ಲಿ ಹಣ ನೀಡಿದಾಗ ಪೊಲೀಸರು ಸ್ವೀಕರಿಸುತ್ತಾರೆ. ಹಣ ಇಲ್ಲ ಎಂದವರಿಗೆ Google Pay ಮಾಡುವಂತೆ ಸೂಚಿಸುತ್ತಿದ್ದು, ಗೂಗಲ್ ಪೇ ಮಾಡಿದ ಹಣ ಚಿನ್ನದ ವ್ಯಾಪಾರಿಯೊಬ್ಬರ ಪಾಲಾಗುತ್ತಿದೆ!
ನಗರ ಪೊಲೀಸ್ ಠಾಣೆ ಎದುರು ತೆರಳುತ್ತಿದ್ದವರಿಗೆ ಪೊಲೀಸರು ಕೈ ಅಡ್ಡ ಮಾಡಿದ್ದು, ಆಗ ಹೆಲ್ಮೆಟ್ ಧರಿಸಿದ ಕಾರಣ 500ರೂ ಪಾವತಿಗೆ ಕೋರಿದ್ದಾರೆ. `ಸರ್ ಹಣ ತಂದಿಲ್ಲ\’ ಎಂದಾಗ ನಗುಮುಖದಿಂದಲೇ Google pay ನಂ ನೀಡಿದ್ದಾರೆ. ಆ ಫೋನ್ ಸಂಖ್ಯೆಗೆ ಹಣ ಪಾವತಿಸಿದಾಗ ಚಿನ್ನದ ವ್ಯಾಪಾರಿಯ ಮೊಬೈಲ್ ಸದ್ದು ಮಾಡಿದ್ದು, ಮಾಧ್ಯಮದವರ ಮುಂದೆಯೇ ಇದೇ ರೀತಿ ಇನ್ನಿತರರು ಹಣ ಪಾವತಿಸಿದ್ದಾರೆ. ಇದರಿಂದ ಪೊಲೀಸರ ಜೊತೆ ಚಿನ್ನದ ವ್ಯಾಪಾರಿ ಸಹ ಖುಷಿಯಾಗಿದ್ದಾನೆ. ಆದರೆ, ಹಣ ಪಾವತಿಸಿದವರು ಮಾತ್ರ ರಸೀದಿ ಹಿಡಿದು ತಲೆ ಕೆಡಿಸಿಕೊಂಡಿದ್ದಾರೆ!
ಚಿನ್ನದ ವ್ಯಾಪಾರಿ ಖಾತೆಗೆ ಹಣ ಹೋದರೂ PSI ಯಲ್ಲಪ್ಪ ಅವರು ಪೊಲೀಸ್ ಇಲಾಖೆಯ ರಸೀದಿ ನೀಡುತ್ತಿರುವುದು ಹೇಗೆ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ರಸೀದಿಯಲ್ಲಿ ನಗದು ಪಾವತಿ ಎಂದು ನಮೂದಿಸಿದ್ದು, ಸರ್ಕಾರಿ ಖಾತೆಗೆ ಹಣ ಜಮಾ ಆಗದೇ ಇದ್ದರೂ ಸರ್ಕಾರಿ ರಸೀದಿ ದೊರೆತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ಈ ಬಗ್ಗೆ ಪ್ರಶ್ನಿಸಿದವರಿಗೆ ಯಲ್ಲಪ್ಪ ಅವರು ಸರಿಯಾಗಿ ಉತ್ತರಿಸಿಲ್ಲ. `ಮಾಧ್ಯಮದವರು ಎಂದು ಮೊದಲೇ ಹೇಳೋದಲ್ವ?\’ ಎನ್ನುತ್ತ ತಲೆ ಕೆರೆದುಕೊಂಡಿದ್ದಾರೆ!
ಈ ಬಗ್ಗೆ S News ಡಿಜಿಟಲ್ CPI ಅವರನ್ನು ಪ್ರಶ್ನಿಸಿದಾಗ `ತಾನು ಕಾರವಾರಕ್ಕೆ ಮೀಟಿಂಗ್ ಹೋಗಿದ್ದೆ. ಇದೀಗ ಭಟ್ಕಳಕ್ಕೆ ಮರಳುತ್ತಿದ್ದು, ಅಲ್ಲಿ ಹೋಗಿ ವಿಚಾರಿಸುವೆ\’ ಎಂದರು. PSI ಯಲ್ಲಪ್ಪ ಅವರು ಫೋನ್ ರಿಸಿವ್ ಮಾಡಲಿಲ್ಲ. ನಂತರ ಮತ್ತೆ ಫೋನ್ ಮಾಡಿದಾಗ ಅವರು ಸ್ವಿಚ್ ಆಫ್ ಮಾಡಿಕೊಂಡಿದ್ದರು.