ಯಲ್ಲಾಪುರ – ಅಂಕೋಲಾದ ಗಡಿಭಾಗವಾದ ಕಲ್ಲೇಶ್ವರದಲ್ಲಿ `ಕೃಷ್ಣಾಷ್ಟಮಿ ಸಡಗರ\’ದ ( Krishna janmashtami ) ಸಿದ್ಧತೆ ಜೋರಾಗಿದೆ.
ಅಗಸ್ಟ 26ರ ಸಂಜೆ ಇಲ್ಲಿನ ದೇವಿ ಹಾಗೂ ಗೋಪಾಲಕೃಷ್ಣ ಸಭಾ ಭವನದಲ್ಲಿ ಕೃಷ್ಣ ಜನ್ಮಾಷ್ಠಮಿ ( Krishna janmashtami ) ಅಂಗವಾಗಿ ವಿವಿಧ ಸ್ಪರ್ಧೆ, ಸನ್ಮಾನ, ಯಕ್ಷಗಾನ ಸೇರಿ ಬಗೆ ಬಗೆಯ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 5 ಗಂಟೆಗೆ ಶುರುವಾಗಲಿರುವ ಈ ಕಾರ್ಯಕ್ರಮವನ್ನು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಉದ್ಘಾಟಿಸಲಿದ್ದಾರೆ. TSS ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಸಭಾ ಅಧ್ಯಕ್ಷತೆವಹಿಸಲಿದ್ದಾರೆ.
ಮಾಜಿ ಶಾಸಕಿ ರೂಪಾಲಿ ನಾಯ್ಕ, ಸ್ಥಳೀಯ ಪ್ರಮುಖರಾದ ಗೋಪಾಲಕೃಷ್ಣ ವೈದ್ಯ, ವಿನೋದ ಭಟ್ಟ, ನಾರಾಯಣ ಭಟ್ಟ ಜಾಯಿಕಾಯಿಮನೆ ಸಭೆಯಲ್ಲಿರಲಿದ್ದಾರೆ. ಡಾ ನವೀನ ಸಿ ಹೆಗಡೆ ಅವರು ಸನ್ಮಾನ ಸ್ವೀಕರಿಸಲಿದ್ದು, ಸಂಜೆ 7 ಗಂಟೆಯಿ0ದ ನಾಧಾವಾದನ ಸಂಸ್ಥೆಯವರಿ0ದ `ಯಕ್ಷಗಾಯನ ವೈಭವ\’ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ನೀವು ಬನ್ನಿ… ನಿಮ್ಮವರನ್ನು ಕರೆತನ್ನಿ!
S News ಡಿಜಿಟಲ್