ಅಕ್ರಮವಾಗಿ ಹಣಗಳಿಸುವ ಉದ್ದೇಶದಿಂದ `ಕಟ್ಟಿ ಹೌಸಿ ಹೌಸಿ\’ ಎಂಬ ಜೂಜಾಟ ( Illegal games ) ನಡೆಸುತ್ತಿದ್ದ ಮೂವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿತರ ಬಳಿ 10 ಕಾಗದದ ಚೂರು, ಬಿಳಿ ಹಾಳೆ ಹಾಗೂ 610ರೂ ಹಣ ಸಿಕ್ಕಿದೆ!
ಅಗಸ್ಟ 22ರಂದು ಮಧ್ಯಾಹ್ನ ಹೊನ್ನಾವರದ ಕಾಸರಕೋಡ್ ಮಲಬಾರಕೇರಿ ಆಯುಷ್ಮಾನ್ ಆರೋಗ್ಯ ಕೇಂದ್ರದ ಹಿಂದಿನ ನೀರಿನ ಟಾಕಿ ಬಳಿ ಕುಮಟಾ ಹೆರವಟ್ಟಾದ ಪವನ್ ಮಂಜುನಾಥ ಮುಕ್ರಿ (22) ತನ್ನ ಇಬ್ಬರು ಬಾಲ್ಯ ಸ್ನೇಹಿತರಾದ ಹೊನ್ನಾವರ ಹಳದಿಪುರದ ವಿಕಾಸ ನಾಗೇಶ ಮುಕ್ರಿ (26) ಹಾಗೂ ಮಂಜುನಾಥ ಮಾಸ್ತಿ ಮುಕ್ರಿ (28) ಜೊತೆ ಸೇರಿ `ಕಟ್ಟಿ ಹೌಸಿ ಹೌಸಿ\’ ( Illegal games )ಎಂಬ ಚೀಟಿ ಆಟ ಆಡುತ್ತಿದ್ದರು.
ಆಗ ಅಲ್ಲಿ ದಾಳಿ ನಡೆಸಿದ PSI ರಾಜಶೇಖರ ವಂದಲಿ `ಕಟ್ಟಿ ಹೌಸಿ ಹೌಸಿ\’ ಆಟಕ್ಕೆ ಬಳಸಿದ 10 ಕಾಗದದ ಚೀಟಿಗಳನ್ನು ವಶಕ್ಕೆ ಪಡೆದರು. ನಂತರ ಅಂಕಿ-ಸ0ಖ್ಯೆಗಳನ್ನು ಬರೆದುಕೊಂಡಿದ್ದ ಬಿಳಿ ಹಾಳೆ ಹಾಗೂ ಅವರಲ್ಲಿದ್ದ 610 ರೂಪಾಯಿಯನ್ನು ಜಪ್ತು ಮಾಡಿದರು. ಕಾನೂನುಬಾಹಿರವಾಗಿ ಈ ಆಟ ಆಡುತ್ತಿದ್ದ ಬಗ್ಗೆ ತಿಳುವಳಿಕೆ ನೀಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದರು.