ಶಿರಸಿ-ಯಲ್ಲಾಪುರ ರಸ್ತೆಯ ಜಂಬೇಸಾಲ್ ಬಳಿ ಬುಧವಾರ ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ದೊಡ್ಡ ಮರ ಬಿದ್ದಿದೆ. ಇದರಿಂದ ಶಿರಸಿ-ಯಲ್ಲಾಪುರ ಮಾರ್ಗದ ಸಂಚಾರ ಅಸ್ತವ್ಯಸ್ತವಾಗಿದೆ.
ರಸ್ತೆಯ ಎರಡು ಕಡೆ ಹಲವು ವಾಹನಗಳು ಸಾಲುಗಟ್ಟಿ ನಿಂತಿವೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಸಂಜೆ ಒಳಗೆ ರಸ್ತೆಯಲ್ಲಿ ಬಿದ್ದ ಮರ ಪೂರ್ತಿಯಾಗಿ ತೆಗೆಯುವ ಸಾಧ್ಯತೆಗಳಿವೆ. ಮರ ಅಡ್ಡಬಿದ್ದ ಪರಿಣಾಮ ಸರ್ಕಾರಿ ಬಸ್ ಸೇರಿ ಹಲವು ವಾಹನಗಳಲ್ಲಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಇದನ್ನೂ ಓದಿ: ತಂಬಾಕು ತ್ಯಜಿಸಿದ ಶಾಸಕ!
ಸ್ಥಳೀಯರು ಹಾಗೂ ಕೆಲ ಬೈಕ್ ಸವಾರರು ಒಳರಸ್ತೆಗಳ ಮೂಲಕ ಸುತ್ತುವರೆದು ಸಂಚರಿಸಿ ತಲುಪಬೇಕಾದ ಸ್ಥಳ ತಲುಪಿದರು. ಮರ ಬೀಳುವ ವೇಳೆ ಅಡಿಭಾಗದಲ್ಲಿ ಜನ ಸಂಚಾರ ಇಲ್ಲದ ಕಾರಣ ಪ್ರಾಣಾಪಾಯವಾಗಿಲ್ಲ.