ಯಲ್ಲಾಪುರ: ಕೃಷಿ ಇಲಾಖೆ ಸಹಾಯ ನಿರ್ದೇಶಕ ನಾಗರಾಜ ನಾಯ್ಕ ಬುಧವಾರ ಗದ್ದೆಗೆ ಇಳಿದು ಕೃಷಿ ಚಟುವಟಿಕೆ ನಡೆಸಿದರು.
ತಟಗಾರ ಗ್ರಾಮದ ಹಂಗಾರಿಮನೆಯಲ್ಲಿ ಅವರು `ಕೃಷಿ ಪಾಠಶಾಲೆ\’ ಅಂಗವಾಗಿ ನಾಟಿ ಮಾಡಿದರು. ತಮ್ಮೊಂದಿಗೆ ಇಲಾಖೆ ಸಿಬ್ಬಂದಿಯನ್ನು ಕರೆತಂದಿದ್ದ ಅವರು ಸಿಬ್ಬಂದಿಗೆ ಸಹ ಕೃಷಿ ಕೆಲಸಗಳ ಬಗ್ಗೆ ತಿಳಿಸಿದರು. ಊರಿನವರು ಕೆಸರು ಗದ್ದೆಗೆ ಇಳಿದು ಭತ್ತ ನಾಟಿ ಕೆಲಸಕ್ಕೆ ಕೈ ಜೋಡಿಸಿದರು. ಗದ್ದೆಯಲ್ಲಿ ನೇರಕ್ಕೆ ಹಗ್ಗ ಕಟ್ಟಿ ಸಾಲಾಗಿ ಭತ್ತ ನಾಟಿ ಮಾಡಲಾಯಿತು. `ಅಪರೂಪದ ಭತ್ತದ ತಳಿಗಳನ್ನು ಸಂರಕ್ಷಿಸುವುದಕ್ಕಾಗಿ ಕೃಷಿ ಇಲಾಖೆ ವಿವಿಧ ಪ್ರಯೋಗಗಳನ್ನು ಮಾಡುತ್ತಿದೆ. ಕೃಷಿ ಪಾಠಶಾಲೆಯ ಭಾಗವಾಗಿ ಬುಧವಾರ ನಾಟಿ ಕಾರ್ಯ ನಡೆಸಲಾಯಿತು\’ ಎಂದು ನಾಗರಾಜ ನಾಯ್ಕ ಮಾಹಿತಿ ನೀಡಿದರು.
S News Digitel
ಗಟಾರಕ್ಕಿಳಿದ ಸರ್ಕಾರಿ ಬಸ್ಸು
ಜೋಯಿಡಾ: ಬೆಳಗಾವಿಯಿಂದ ಕಾರವಾರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ಸು ಗಣೇಶಗುಡಿ ಬಳಿ ಗಟಾರಕ್ಕೆ ಇಳಿದಿದೆ.
ಏಕಾಏಕಿ ದ್ವಿಚಕ್ರ ವಾಹನ ಅಡ್ಡ ಬಂದ ಕಾರಣ ಬಸ್ಸಿನ ಚಾಲಕ ಎಡಕ್ಕೆ ವಾಲಿದ್ದು, ಬಸ್ಸು ಗಟಾರದ ಪಾಲಾಯಿತು. ಇದರಿಂದ ಯಾರಿಗೂ ಹಾನಿಯಾಗಿಲ್ಲ. ಕೆಲ ಹೊತ್ತಿನ ನಿರಂತರ ಪ್ರಯತ್ನದಿಂದ ಬಸ್ಸು ಮೇಲೆದ್ದಿತು.
S News Digitel
ಭುವನಗಿರಿಯಲ್ಲಿ ನಡೆದ ಭಜನಾ ಕಾರ್ಯಕ್ರಮ
ಸಿದ್ದಾಪುರ: ಭುವನಗಿರಿಯ ಭುವನೇಶ್ವರಿ ದೇವಸ್ಥಾನದಲ್ಲಿ ನಡೆದ ಭಜ ಭುವನೇಶ್ವರಿ\’ ಭಜನಾ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸಿತು.
ಭುವನಗಿರಿ ದೇವಸ್ಥಾನದ ಅಧ್ಯಕ್ಷ ಶ್ರೀಕಾಂತ ಹೆಗಡೆ, ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ, ದೇವಾಲಯದ ಪ್ರಧಾನ ಅರ್ಚಕ ಶ್ರೀಧರ ಭಟ್ಟ ಮುತ್ತಿಗೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಪಂ. ಶ್ರೀಪಾದ ಹೆಗಡೆ ಸೋಮನಮನೆ ಅವರ ಭಜನೆಯಿಂದ ಆರಂಭಗೊoಡು, ನಂತರ ಸುಮಾರು 65ಕ್ಕೂ ಹೆಚ್ಚು ಕಲಾವಿದರು ನಿರಂತರ ಭಜನಾ ಕಾರ್ಯಕ್ರಮವನ್ನು ನಡೆಸಿದರು.
S News Digitel
ಕ್ರೀಡೆಯಲ್ಲಿಯೂ ಮುಂದೆ ಚಂದನ ಕಾಲೇಜು
ಶಿರಸಿ: ತಾಲೂಕು ಮಟ್ಟದ ಪ.ಪೂ ಕಾಲೇಜುಗಳ ಕ್ರೀಡಾಕೂಟದಲ್ಲಿ ಚಂದನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 200 ಮೀ. ಓಟದ ಸ್ಫರ್ಧೆಯಲ್ಲಿ ಸಿಂಚನಾ ಹೆಗಡೆ ದ್ವಿತೀಯ ಸ್ಥಾನ, ಬಾಲಕರ ವಿಬಾಗದಲ್ಲಿ ಹ್ಯಾಮರ್ ಥ್ರೋನಲ್ಲಿ ವರುಣ ಮಡಿವಾಳ ಪ್ರಥಮ ಸ್ಥಾನ, ಷಾಟ್ಪುಟ್\’ನಲ್ಲಿ ಅಬ್ದುಲ್ ರಿಯಾನ್ ಪ್ರಥಮ ಸ್ಥಾನ ಪಡೆದಿದ್ದಾರೆ. ಸಹನಾ ಹೆಗಡೆ 100 ಮೀ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ತಸ್ಮೀಯಾ ಜವಳಿ ಷಾಟ್ ಪುಟ್ನಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.
ಗುಂಪು ಆಟದಲ್ಲಿ ಬಾಲಕರ ಷಟಲ್ ಬ್ಯಾಡ್ಮಿಂಟನ್\’ನಲ್ಲಿ ಅರ್ಜುನ್, ಕಾರ್ತಿಕ ಹೆಗಡೆ , ಅಭಿಷೇಕ ಇಂಗಳಸೂರ, ಆದಿತ್ಯ ವಾರೆಕರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಚೆಸ್\’ನಲ್ಲಿ ಪ್ರೀತಮ್ ಹೆಗಡೆ, ಭುವನ ಹೆಗಡೆ ಪ್ರಥಮ ಸ್ಥಾನ, ಬಾಸ್ಕೇಟ್ ಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ
S News Digitel
ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತ ಸಪ್ತಾಹ
ಹೊನ್ನಾವರ: ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತ ಸಪ್ತಾಹ ಸಮಾರೋಪ ಸಮಾರಂಭ ಜರುಗಿತು.
ಸಮಾರೋಪ ಸಮಾರಂಭದಲ್ಲಿ ಖ್ಯಾತ ವಿಜ್ಞಾನಿ, ಶಿಕ್ಷಣತಜ್ಞ ಡಾ.ಸುರೇಂದ್ರ ಕುಲಕರ್ಣಿ ಮಾತನಾಡಿದರು. ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ವಿ.ಜಿ.ಹೆಗಡೆ ಗುಡ್ಗೆ `ಆಯುರ್ವೇದ ಕ್ಷೇತ್ರಕ್ಕೂ ಸಂಸ್ಕೃತದ ಅಮೂಲ್ಯವಾದ ಕೊಡುಗೆಗಳಿದೆ\’ ಎಂದರು.
ಸoಸ್ಥೆಯ ಅಧ್ಯಕ್ಷ ಉಮೇಶ ಹೆಗಡೆ ಅಧ್ಯಕ್ಷತೆವಹಿಸಿದ್ದರು. ಆಡಳಿತಾಧಿಕಾರಿ ಎಂ.ಎಸ್. ಹೆಗಡೆ ಮುಖ್ಯ ಶಿಕ್ಷಕಿ ವೈಲೇಟ ಫರ್ನಾಂಡಿಸ್ ಇದ್ದರು. ಶಿಕ್ಷಕಿ ಸೌಮ್ಯ ಹೆಗಡೆ ಸ್ವಾಗತಿಸಿ, ಅಂಜನ ಶೆಟ್ಟಿ ವಂದಿಸಿದರು. ಸಂಗೀತಾ ಯಾಜಿ ನಿರ್ವಹಿಸಿದರು.
S News Digitel