ಶಿರಸಿ-ಯಲ್ಲಾಪುರ ರಸ್ತೆಯಲ್ಲಿನ ಹೊಂಡಗಳಲ್ಲಿ ಪ್ರತಿಭಟನಾಕಾರರ ಹೋರಾಟದ ಬಾವುಟಗಳು ಹಾರಾಡುತ್ತಿದೆ. ಹೊಂಡ ಮುಚ್ಚುವ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದರೂ ಯಾರೂ ಗಂಭೀರವಾಗಿ ಪರಿಗಣಿಸದ ಕಾರಣ ಪ್ರತಿಭಟನಾಕಾರರು ಕೆಂಪು ಬಣ್ಣದ ಬಾವುಟ ಹಾರಿಸಿದ್ದಾರೆ!
ಶಿರಸಿ-ಯಲ್ಲಾಪುರ ಮಾರ್ಗದ ಹುಳಗೋಳ ಭಾಗದಲ್ಲಿ ರಸ್ತೆಯಲ್ಲಿ ವ್ಯಾಪಕ ಪ್ರಮಾಣದ ಹೊಂಡಗಳಿವೆ. ವಾಹನ ಸವಾರರು ಒಂದು ಹೊಂಡ ತಪ್ಪಿಸಲು ಹೋಗಿ ಇನ್ನೊಂದು ಹೊಂಡದಲ್ಲಿ ಬೀಳುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಕೆಲವರು ಅಲ್ಲಲ್ಲಿ ಕೆಂಪು ಬಾವುಟ ಹಾರಿಸಿದ್ದಾರೆ.
`ಲೋಕೋಪಯೋಗಿ ಇಲಾಖೆಯವರಿಗೆ ಹೊಂಡದ ಬಗ್ಗೆ ಮಾಹಿತಿಯಿದ್ದರೂ ರಸ್ತೆ ರಿಪೇರಿಗೆ ಹಣವಿಲ್ಲ ಎಂಬ ಉತ್ತರ ಬರುತ್ತಿದೆ. ಗಣ್ಯರು ಹಾಗೂ ವಿವಿಧ ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸಂಚರಿಸಿದರೂ ಹೊಂಡ ಮುಚ್ಚುವ ಬಗ್ಗೆ ಆಸಕ್ತಿ ತೋರಿಲ್ಲ\’ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.